Teachers Appreciation Program at Kotehaalu Government School

ಸ.ಕಿ.ಪ್ರಾ.ಶಾಲೆ.ಕೋಟೆಹಾಳು ಶಾಲೆಯಲ್ಲಿ ಜಯ ಕರ್ನಾಟಕ ವೇದಿಕೆಯವರು ಮುಖ್ಯ ಗುರುಗಳಾದ ಸಿ.ಆರ್.ಸುರೇಶ್ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಭಿನಂದಿಸಿ ಮಾತನಾಡಿ,ಇವರು ಇಂತಹ ಒಂದು ಕುಗ್ರಾಮದಲ್ಲಿ ಮಲೆನಾಡಿನ ಪರಿಸವನ್ನು ನಿರ್ಮಾಣ ಮಾಡಿದ್ದಾರೆ.ಮಕ್ಕಳ ಕಲಿಕೆಯು ಕೂಡ ಉತ್ತಮವಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ರಾಮಕೃಷ್ಣ ರವರು ಹೇಳಿದರು. ನಾವು ಶಿಕ್ಷಣಕ್ಕೆ ಯಾವಾಗಲೂ ಸಹಾಯ ಸಹಕಾರ ನೀಡುತ್ತೇವೆ. ಇಂತಹ ಶಿಕ್ಷಕರನ್ನು ಗುರುತಿಸುವ ಕಾರ್ಯವನ್ನು ನಮ್ಮ ಸಂಘಟನೆಯಿಂದ ಮಾಡುತ್ತಿದ್ದೇವೆ.ಈ ಶಾಲೆಯು ವಿಶೇಷವಾಗಿದ್ದು ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದು,ಪೋಷಕರಿಗಾಗಿ ವಾಟ್ಸಾಪ್ ಗ್ರೂಪ್.ವಾರಕ್ಕೊಂದು ಪರೀಕ್ಷೆ.ಮಗ್ಗಿ ಟಾರ್ಗೆಟ್ ಹೀಗೆ ವಿವಿಧ ನೂತನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವುದು ವಿಶೇಷವಾಗಿದೆ, ಇಂತಹ ಶಿಕ್ಷಕರು ನಮ್ಮ ತಾಲೂಕಿಗೆ ಹೆಮ್ಮೆಯ ವಿಚಾರವೆಂದು ಪ್ರಧಾನ ಕಾರ್ಯದರ್ಶಿ ಹೇಳಿದರು.ಈ ಅಭಿನಂದನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟೇಶ್.ಹೇಮಣ್ಣ,ಸೋಮಶೇಖರ್ ಗೌಡ.ಶಿಕ್ಷಕರಾದ ಹುಸೇನಿ ಮತ್ತು ಸಂಘಟನೆಯ ಪದಾಧಿಕಾರಿಗಳು ಆದ ಹುಸೇನಪ್ಪ,ಕಾಳಿಂಗಪ್ಪ,ಸುರೇಶ್.ಕರ್ಣ.ರೋಹಿತ್.ಮುಂತಾದವರು ಪಾಲ್ಗೊಂಡಿದ್ದರು.

Leave a Reply