School Kits Distribution at Pavagada Government School

ಈ ದಿನ (19.07.2018)ಪಾವಗಡ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆ.ರಾಂಪುರ ಗ್ರಾಮದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಊಟದ ತಟ್ಟೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮಿಗಳು ಆಶಿರ್ವಚನ ನೀಡಿ ಶಾಲೆಯಲ್ಲಿರುವ ಮಾತನಾಡುವ ದೇವರುಗಳ (ಮಕ್ಕಳ) ಸೇವೆಯನ್ನು ಎಲ್ಲರೂ ಶ್ರದ್ಧೆಯಿಂದ ಮಾಡಬೇಕು. ಇವರಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕಲಿಸಬೇಕು. ಉತ್ತಮ ನಾಗರೀಕರಾಗಿ ಸ್ವಾವಲಂಬನೆಯಿಂದ ಜೀವನ ನಡೆಸುವುದನ್ನು ಕಲಿಯಿರಿ ಎಂದು ತಿಳಿಸಿದರು ಹಾಗೂ ಈ ಎಲ್ಲಾ ಮಕ್ಕಳ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಹೆಚ್.ವಿ.ಗೋವಿಂದರಾಜಶೆಟ್ಟಿ ಯವರು ಜೀವನದಲ್ಲಿ ತಂದೆ -ತಾಯಿ ಋಣ, ಗುರು ಋಣ ಹಾಗೂ ಸಮಾಜದ ಋಣ ತೀರಿಸುವ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು. ಶ್ರೀ ರಾಮಕೃಷ್ಣ ಸೇವಾಶ್ರಮದ ಸೇವಾಕಾರ್ಯಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಜೀವನ ಕಟ್ಟಿಕೊಂಡಿರುವ ಯುವಜನಾಂಗ ಸಮಾಜಮುಖಿ ಕಾರ್ಯಗಳನ್ನು ಮಾಡಲು ತಿಳಿಸಿದರು.

ಸಮಾರಂಭದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಭಕ್ತರಾದ ಶ್ರೀ ಪಿ.ಎಸ್.ಗೋಪಾಲಕೃಷ್ಣ, ಶ್ರೀ ಕೆ.ಎಸ್.ರಾಮಮೂರ್ತಿ, ಶ್ರೀ ವಿಶ್ವಮೋಹನ್, ಶ್ರೀ ಕೆ.ವಿ.ರಾಮನಾಥ್, ಶ್ರೀ ಬಾಲಾಜಿಯವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಮ್ಮ, ಶಿಕ್ಷಕರಾದ ಚಂದ್ರಶೇಖರ್, ಅತಿಥಿ ಶಿಕ್ಷಕರಾದ ಶ್ರೀಮತಿ ಭಾರತಿ, ಅಪರ್ಣ ಹಾಜರಿದ್ದರು ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿದ್ದರು.

ಶಿಕ್ಷಣ ಸಂಯೋಜಕರಾದ ಶ್ರೀ ಸೇವಾನಾಯ್ಕ,ಶ್ರೀ ತಿಮ್ಮಪ್ಪ , ಸಿ.ಆರ್.ಪಿ ತಿಪ್ಪೇಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀಮತಿ ಮಂಜುಳ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಎ.ಗೋಪಿ, ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಪತ್ರಿಕಾ ವರದಿಗಾರರಾದ ಶ್ರೀ ನಾಗೇಶ್, ಆನಂದಕುಮಾರ್, ನಾಗಾರ್ಜುನ, ಗ್ರಾಮದ ಪ್ರಮುಖರು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಗೊಳಿಸಿದ ಸರ್ವರಿಗೂ ಧನ್ಯವಾದಗಳು

ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು.

School Kit Distribution Program at Pavagada Government School

Thanks to Mr. Govindaraja Shetty for sharing these details

Leave a Reply