Menase Government School Shringeri

Thanks to Mr. Ravindra R D for sharing the success story of this government school.

ಈ‌ ಮೇಲಿನ ಮೂರೂ ಒಂದು ಸರ್ಕಾರಿ ಶಾಲೆಯ ಚಿತ್ರಗಳು. ಇದುವರೆಗೆ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಹಣವನ್ನು ದಾನಿಗಳಿಂದ ಸಂಗ್ರಹಿಸಿ ಶಾಲೆಗೆ ಬೇಕಾದ ಸ್ವಂತ ಬಸ್ಸು, 500 ಜನ ಕೂರಬಹುದಾದ ಸುಸಜ್ಜಿತ ಆಡಿಟೋರಿಯಂ (ಇಲ್ಲಿ ಬಳಸುತ್ತಿರುವ ಒಂದೊಂದು ಲೈಟ್ ಬೆಲೆಯೇ 25 ಸಾವಿರ, ಅಂದಾಜು ವೆಚ್ಚ 40 ಲಕ್ಷ) ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್, ತೆರೆದ ಗ್ರಂಥಾಲಯ, ಊಟದ ಹಾಲ್, ಸುಸಜ್ಜಿತ ಪ್ರಯೋಗಾಲಯ, ಶಾಲೆಯೆದುರು ಲಾನ್, ಸುಂದರ ಮುಖ್ಯ ಶಿಕ್ಷಕರ ಕೊಠಡಿ, ಸಾಕಷ್ಟು ತರಗತಿ‌ಕೊಠಡುಗಳು, ಸಿದ್ಧಗೊಳ್ಳುತ್ತಿರುವ ವಿಶಾಲ ಸ್ಟೇಡಿಯಂ, ಅಡುಗೆ ಮನೆ, ಹೈಟೆಕ್ ಶೌಚಾಲಯ ಒಂದೇ ಎರಡೇ ಈ ಶಾಲೆಯ ಸಾಧನೆ. ಇದೆಲ್ಲ ಇರುವುದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯಲ್ಲಿ.ಇದಕ್ಕೆಲ್ಲ ಕಾರಣಕರ್ತರು ಈ ಶಾಸಕರ ಮಾದರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಗಂಗಾಧರಪ್ಪ ಸರ್. ಇನ್ನೂ ಮಾಡುವುದಿದೆ ಎಂಬ ವಿನೀತ ಭಾವನೆ ಹೊಂದಿರುವ ಇವರ ಶಾಲೆಯನ್ಬು ಸಂದರ್ಶಿಸುವ ಭಾಗ್ಯ ಇಂದು ನನ್ನದಾಗಿತ್ತು. ಈ ದಿನ ಈ ಶಾಲೆಗೆ DSERT ಯ ಹಿರಿಯ ಸಹಾಯಕ ನಿರ್ದೇಶಕರೂ, TPD ಯ ರಾಜ್ಯ ಹಂತದ ನೋಡೆಲ್ ಅಧಿಕಾರಿಗಳೂ ಆದ ಶ್ರೀಯುತ ವೇದ ಮೂರ್ತಿ ಸರ್ ಭೇಟಿ ನೀಡಿ‌ ಮುಕ್ತ ಮನದಿಂದ ಶಾಲೆಯನ್ನು, ಮುಖ್ಯ ಶಿಕ್ಷಕರನ್ನು ಹೊಗಳಿ‌ ಬೆನ್ನು ತಟ್ಟಿದರು. ರಾಜ್ಯಕ್ಕೇ ಮಾದರಿ‌ ಎಂದು‌ ಸಂತೋಷ ಪಟ್ಟರು.ಜೊತೆಗೆ ರಾಜ್ಯ‌ಹಂತದಲ್ಲಿ‌ ಇಂತಹ ಪ್ರತಿಭೆಗಳನ್ನು‌ ಪರಿಚಯಿಸಲು‌ ಒಂದು‌ ವೇದಿಕೆ‌ ಸಿದ್ಧಗೊಳಿಸಲು‌ ಪ್ರಯತ್ನಿಸುವುದಾಗಿಯೂ ತಿಳಿಸಿದರು. ಮನೆ ಮಠ, ಕುಟುಂಬ ಎಲ್ಲವನ್ನೂ ಮರೆತು ಶಾಲೆಯನ್ನೇ ಸರ್ವಸ್ವವಾಗಿಸಿಕೊಂಡ ಗಂಗಾಧರಪ್ಪ ಸರ್ ತಮಗೆ ಹೃದಯ ಪೂರ್ವಕ ಅಭಿನಂದನೆಗಳು.

– From 250 students and school staff

Leave a Reply