Making a Difference by Creative Teacher and Community Help

An inspiring story by a creative teacher and community help through government school

ಸಂಪುಟ _೧ ಸಂಚಿಕೆ ೫೬
ನಮ್ಮ ಊರು ನಮ್ಮ ಹೆಮ್ಮೆ
ಸರಣಿ ಬರಹ ಮಾಲಿಕೆ

Develop School, www.developschools.org ವ್ಯಾಟ್ಸಪ್ ಗ್ರೂಪ್ ನ ಯಶೋಗಾಥೆ

ಬಾಲಪ್ಪನ ಬಾಳಿಗೆ ಬೆಳಕಾದ ಕಥೆ

ಒಬ್ಬ ಕ್ರೀಯಾಶೀಲ ಶಿಕ್ಷಕನ ಚಿಂತನೆಯಿಂದ ರೋಗಗ್ರಸ್ತ ಮಗುವಿಗೆ ಬೆಳಕಾದ ಯಶೋಗಾಥೆ ಇದು.

ಕುಷ್ಟಗಿ ತಾಲೂಕಿನ ಬಿಜಕಲ್ಲ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಟೆಂಗುಂಟಿ,

ಈ ಶಾಲೆಯಲ್ಲಿ ಒಂದನೆಯ ತರಗತಿಯಿಂದ ಏಳನೇ ತರಗತಿಯವರೆಗೆ ಎರಡನೂರಕ್ಕು ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿವೆ, ಸದರಿ ಶಾಲೆಯ ೨ ನೆಯತರಗತಿ ವಿದ್ಯಾರ್ಥಿ ಬಾಲಪ್ಪ ತಂದೆ ಯಲ್ಲಪ್ಪ ಗುಂತ ಸಾ/ ಟೆಂಗುಂಟಿ ತಂದೆಯನ್ನು ಕಳೆದುಕೊಂಡ ಮಗು ತಮ್ಮ ತಾಯಿಯ ತವರು ಮನೆಯಲ್ಲಿದ್ದುಕೊಂಡು ವಿಧವಾತಾಯಿ ಶ್ರೀಮತಿ ಬಡತನದಲ್ಲಿ ದೂರದ ಊರಿಗೆ ಹೋಗಿ ಮಗನನ್ನು ವೈದ್ಯರಲ್ಲಿಗೆ ಕರೆದೊಯ್ಯದ ಪರಿಸ್ಥಿತಿಯಲ್ಲಿ ಇದ್ದ ಊರ ಶಾಲೆಗೆ ದಿನವೂ ಬರುತ್ತಿದ್ದ ಆದರೆ ಉಳಿದ ಮಕ್ಕಳಾರು ಬಾಲಪ್ಪ ನ ಜೊತೆ ಬೆರೆಯುತ್ತಿರಲಿಲ್ಲ, ಅವನ ಜೊತೆ ಕೂಡುತ್ತಿರಲಿಲ್ಲ, ಆತನಕಂಡರೆ ಬಲುದೂರ ಹೋಗುವದನ್ನು ಕಂಡು ಮಮ್ಮಲ ಮರುಗಲು ಕಾರಣ ಏನೆಂದರೆ ಬಾಲಪ್ಪನಿಗೆ ಮೈತುಂಬಾ ಗುಳ್ಳೆಗಳು ರಸಿಗಿ, ಗುಳ್ಳೆ ಒಡೆದು ರಕ್ತವಾಗುವುದು, ಸೊಳ್ಲೆಗಳು ಮೈಮೇಲೆ ಕುಳಿತುಕೊಂಡು ಮೈ ಕೈ ಕರೆದುಕೊಳ್ಳುವುದು ನಡೆದೆ ಇತ್ತು

ಪ್ರತಿದಿನ ಶಾಲೆಯಲ್ಲಿ ಗಮನಿಸಿ ಸಾಕಷ್ಟು ನೊಂದುಕೊಳ್ಳುತ್ತಿದ್ದ ಅದೆ ಶಾಲೆಯ ವಿಜ್ನಾನ ಶಿಕ್ಷಕ ಮಂಜುನಾಥ ಎಲ್, ಶಿಕ್ಷಕರು ವರ್ಷ ಕೊಮ್ಮೆ ಎಲ್ಲ ಮಕ್ಕಳ ಉಚಿತ ಆರೋಗ್ಯ ತಪಾಸಣಾ ವೇಳೆ ವೈದ್ಯರು ನೋಡಿ ಕೆಲವು ಮಾತ್ರೆಗಳನ್ನು ನೀಡಿ ತಾಲೂಕು ಆಸ್ಪತ್ರೆಗೆ ತೋರಿಸಿರಿ ಎಂದು ಮಗುವಿನ ಪಾಲಕರಿಗೆ ತಿಳಿಸಿದರು ಮೊದಲೆ ಬಡತನ ತವರು ಮನೆಯಲ್ಲಿ ಇರುವ ಮಗುವಿನ ತಾಯಿ ಅದು ಅಲ್ಲಿಗೆ ಮುಗಿಯಿತು, ನಂತರ ಬಾಲಪ್ಪನ ಸಮೆಸ್ಯೆ ಯ ಕುರಿತು ಉಳಿದ ಮಕ್ಕಳಿಗೆ ಎಷ್ಟು ತಿಳಿ ಹೇಳಿದರು ಆ ಸಮಸ್ಯೆಯಿಂದ ಹೊರಬರಲಾಗಲಿಲ್ಲ

ಶಿಕ್ಷಕ ಮಂಜುನಾಥ Develop Schools ನ ವ್ಯಾಟ್ಸಪ್ ಗ್ರೂಪ್ ನ ಮೊರೆಹೋಗಿ ಬಾಲಪ್ಪನ ಸಮಸ್ಯೆ ಯನ್ನು ಫೋಟೋ ಸಮೇತ ಮಾಹಿತಿಯನ್ನು ರವಾನಿಸಿ ಈ ಕಾಯಿಲೆಗೆ ಯಾವುದಾದರೂ ಮುಲಾಮು, ಔಷಧದ ಬಗ್ಗೆ ಮನವಿ ಮಾಡಿದರು ನೋಡಿ, ಕೂಡಲೆ ಕಾರ್ಯ ಪ್ರವೃತರಾದವರು ರಮೇಶ ಬೆಟ್ಟಯ್ಯ ಎನ್ನುವ ಸಾಪ್ಟವೇರ ಇಂಜಿನಿಯರ್, ಗಿರೀಶ ಮೂಡಿಗೆರೆ ಎನ್ನುವ ಗ್ರೂಪ್ ಎಡ್ಮಿನ್ ರವರು ಶಿಕ್ಷಣ ಇಲಾಖೆಯ ಕಮಿಶನರ್, ಆರೋಗ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ದೆಹಲಿ, ಬೆಂಗಳೂರು, ಉನ್ನತ ಅಧಿಕಾರಿಗಳಿಗೆ, ಕೊಪ್ಪಳ ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ, ಕೊಪ್ಪಳ ಡಿ ಡಿ ಪಿ ಆಯ್ , ಅವರಿಗೆ ಸದರಿ ಮಗುವಿನ ಆರೋಗ್ಯ ಸಮೆಸ್ಯೆಯ ಕುರಿತ ಪೋಟೋ ಸಮೇತ ವರದಿಮಾಡಿದರು

ನೋಡಿ ಆಗ ಉನ್ನತಾಧಿಕಾರಿಗಳ ದಂಡೆ ತಾಲೂಕು ಹಂತದಿಂದ ರಾಜ್ಯಮಟ್ಟದ ಕಿರಿಯ ಹಿರಿಯ ಅಧಿಕಾರಿ ವರ್ಗದವರು ಓಡೋಡಿಬಂದರು ಮಗುವನ್ನು ಆಶಾಲೆಯ ಶಿಕ್ಷಕನನ್ನು ಕಂಡುಮಾಹಿತಿ ಕೇಳತೊಡಗಿದರು. ಆಗ ಮಂಜುನಾಥ ಅವರು ನಾನು ಏನೋ ತಪ್ಪು ಮಾಡಿದೆ, ಎನ್ನುವ ಆತಂಕ ಒಂದಡೆ , ಮತ್ತೊಂದುಕಡೆ ಮಗುವಿಗೆ ಪ್ರಾಮಾಣಿಕ ನ್ಯಾಯ ದೊರೆಯಲಿ ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಂಡರು. ಬಂದಂತಹ ಅಧಿಕಾರಿಗಳು ಮೊದಲಿಗೆ ಹೇಳಿದ ಮಾತು ಮಂಜುನಾಥ ಅವರನ್ನು ಅಭಿನಂದಿಸಿದ್ದು !!!

ಜೂನ್ ೨೦೧೮ ರಹೊತ್ತಿಗೆ ಬಾಲಪ್ಪನನ್ನು ಕೂಡಲೆ ಕೊಪ್ಪಳ, ಬಳ್ಳಾರಿ ಆಸ್ಪತ್ರೆಗೆ ಸರಕಾರಿ ವಾಹನದಲ್ಲಿ ಕರೆದೊಯ್ದು ತಪಾಸಣೆಮಾಡಿದರು, ರಕ್ತದ ಮಾದರಿಯನ್ನು ದೆಹಲಿಗೆ ಕಳಿಸಿದರು,ಮಗು ಜನಿಸಿದ ೬ ತಿಂಗಳಿನಿಂದಲೂ ಬಂದ ಈ ಕಾಯಿಲೆಯ ಬಗ್ಗೆ ಸಂಶೋಧನೆ ನಡೆಸಿದ ವೈದ್ಯಕೀಯ ತಂಡವು ನೂರೆಬೀಯನ್ ಸ್ಕರಬಿಸ್ ಎಂದು ಕರೆದರು ಇದು ವಂಶಪಾರಂಪರ್ಯವಾಗಿ ಬರುವ ಚರ್ಮ ರೋಗವೆಂದು ನವ ದೆಹಲಿಯ ನ್ಯಾಷನಲ್ ಹೆಲ್ತ ಮಿಷನ್ ಉನ್ನತ ವೈದ್ಯಕೀಯ ವಿಭಾಗದ ಡಾ/ ಸುಭಾಸ ಶಂಕರದಾಸ್ ಅವರು ವರದಿ ನೀಡಿದರು ಕಳೆದ ಜೂನ್ ತಿಂಗಳಿನಿಂದ ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರಿಂದಾಗಿ, ನಡೆಸಿದ ವೈದ್ಯಕೀಯ ಉಪಚಾರದಿಂದಾಗಿ ಮಗುವಿನ ಕಾಯಿಲೆ ಕ್ರಮೇಣ ಗುಣಮುಖವಾಗಿ ಪ್ರತಿದಿನ ಮಗು ಶಾಲೆಗೆ ಬರುತ್ತಿದ್ದು, ಎಲ್ಲ‌ ಮಕ್ಕಳಜೊತೆ ಬೆರೆತು ಶಾಲೆ ಕಲಿಯುತ್ತಿದೆ, ಮಗುವಿನ ಬಡಪಾಲಕರು ಶಾಲೆಯ ಶಿಕ್ಷಕರನ್ನು, ತಾಲೂಕು ಹಂತದಿಂದ ರಾಷ್ಟ್ರಮಟ್ಟದ ವರೆಗಿನ ವೈದ್ಯ ರನ್ನು ಸದಾ ಸ್ಮರಿಸಿಕೊಳ್ಳುತ್ತಾರೆ

ಒಂದು ವ್ಯಾಟ್ಸಪ್ ಗ್ರೂಪ್ ಮನಸ್ಸುಮಾಡಿದರೆ, ಏನೆಲ್ಲಾ ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆ ಸಾಕ್ಷಾತ್ ಯಶೋಗಾಥೆ ನಮ್ಮ ಕಣ್ಮುಂದಿದೆ, ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಯೋಜನೆ, ಹಾಗೂ ಕುಷ್ಟಗಿ ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿ ಯವರಿಗೆ ಹಾಗೂ ಮಂಜುನಾಥ ಅವರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿಯ ವರಿಗೂ ಅಭಿನಂದನೆಗಳು ಸಲ್ಲಲೇಬೇಕು

ಚಿತ್ರ ಬರಹ
ನಟರಾಜ್ ಸೋನಾರ್
ಕನ್ನಡ ಸೇವಕ
ಕುಷ್ಟಗಿ
೧೨ ನೆಯ ಆಗಸ್ಟ್ ೨೦೧೮
ರವಿವಾರ

Leave a Reply