Government Lower Primary School, Aaladka Brahmavara, Udupi

ಸ.ಕಿ.ಪ್ರಾ.ಶಾಲೆ ಆಲಡ್ಕ, ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ


Complete renovation of government school within 15 days with the help of old students, parents and villagers …

Address of this government school: Government Lower Primary School, Aaladka, Brahmvavara Taluk, Udupi District, Karnataka, India

ದಟ್ಟ ಕಾನನದ ಮಧ್ಯದ ಶಾಲೆಯೊಂದರ ಸಾರ್ಥಕ ಕಾರ್ಯಕ್ರಮ – ಆಲಡ್ಕದ ದಟ್ಟ ಕಾನನದ ನಡುವೆ ಪುಟ್ಟದೊಂದು ಶಾಲೆ,ಎರಡು ಸುಂದರ ಕೋಣೆಗಳು,ಮುಂದೆ ಒಂದು‌‌ ಭವ್ಯವಾದ ವೇದಿಕೆ.ಮದುಮಗಳಂತೆ ಶೃಂಗಾರಗೊಂಡ ಶಾಲೆಯ ಗತ್ತು. ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುವ ಹೊತ್ತು.ಶಾಲೆಯ ಸುತ್ತಲೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ಸ್ವರ್ಗವೇ ಧಾರೆಗಿಳಿದು ಬಂದಂತೆ ಭಾಸವಾಗುತ್ತಿತು.ಹಸಿವನ್ನು ತಣಿಸಲು‌ ಫಲಹಾರದ ವ್ಯವಸ್ಥೆ. ಪುಟ್ಟ ಪುಟ್ಟ ಮಕ್ಕಳು ಬಣ್ಣ ಬಣ್ಣದ ವೇಷಗಳನ್ನು ತೊಟ್ಟು ಓಡಾಡುವುದನ್ನು ನೋಡುವುದೇ ಚೆಂದ..ಇನ್ನೊಂದು ಕಡೆಯಲ್ಲಿ ‌ಹಳೆ ವಿಧ್ಯಾರ್ಥಿಗಳ ಗುಂಪು ಹಳೆಯ ನೆನಪುಗಳನ್ನು ಮೆಲುಕು ಹಾಕುವ ದೃಶ್ಯ.ಆಗಿನ್ನೂ ಕಾರ್ಯಕ್ರಮ ಪ್ರಾರಂಭವಾಗಿಲ್ಲ,ನಿರೂಪಕರ ಸುಂದರವಾದ, ಆಕರ್ಷಕ ನಿರೂಪಣೆಯನ್ನು ಆಲಿಸುತ್ತ ಕುರ್ಚಿಯನ್ನು‌ ಇಟ್ಟುಕೊಂಡು ಒಂದು ಮೂಲೆಯಲ್ಲಿ ಕುಳಿತುಕೊಂಡೆ.ಒಂದು ಕ್ಷಣ ನನ್ನ ಮನಸ್ಸು ಬಾಲ್ಯದ ಜೀವನಕ್ಕೆ ಹಾತೊರೆಯುತ್ತಿತು.ಮನಸ್ಸಿನ ಅಂತರಂಗದಲ್ಲಿ ಹುದುಗಿ ಹೋದ ಸುಂದರ ಕ್ಷಣಗಳು ಕಣ್ಣ ಮುಂದೆ ಬಂದವು. ನನಗೆ ಅರಿವು ಇಲ್ಲದೇ ಕಣ್ಣುಗಳು ಒದ್ದೆಯಾದವು.ಕಣ್ಣು ಒರೆಸಿ ವೇದಿಕೆಯತ್ತ ದೃಷ್ಟಿ ಇಟ್ಟೆ. ಸಾಲಾಗಿ ಜೋಡಿಸಿದ ಕುರ್ಚಿಗಳು ಅತಿಥಿಗಳಿಗಾಗಿ ಕಾಯುತ್ತಿತು. ಅತಿಥಿಗಳ ಆಗ ತಾನೇ ಆಗಮಿಸಿದರು.ಹಳೆ ವಿಧ್ಯಾರ್ಥಿಗಳು ಗಣ್ಯರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.ಉಡುಪಿಯ ಶಾಸಕರಾದ ರಘುಪತಿ ಭಟ್ ರವರು ಎಂದಿನಂತೆ ತಮ್ಮ ಇನ್ನೋವಾ ಕಾರಿನಲ್ಲಿ ಕೆಳಗಿದು ಜನರ ಕೈ ಕುಲುಕಿ ವೇದಿಕೆಯತ್ತ ಹೆಜ್ಜೆಗಳನ್ನಿಟ್ಟು ವೇದಿಕೆ ಹತ್ತಿದರು.ಅತಿಥಿಗಳಿಂದ ವೇದಿಕೆಯಲ್ಲಿದ್ದ ಕುರ್ಚಿಗಳು ಬರ್ತಿಯಾದವು..ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.ಶಾಸಕರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ‌ ನನಗೆ ಆಲ್ಕಡ ಶಾಲೆಯ ಬಗ್ಗೆ ಅಷ್ಟೇನೂ ತಿಳಿದಿಲ್ಲ ಆದರೆ ರಮೇಶ್ ಭಟ್ರ ಶಾಲೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. 1961 ಕ್ರಷ್ಣ ಅಡಿಗರ ಮನೆಯ ಪಡಸಾಲೆಯಲ್ಲಿ ಆರಂಭವಾದ ಶಾಲೆ 58 ವರ್ಷಗಳನ್ನು ಕಂಡಿದೆ. ಅಂದು ಇದ್ದರು 120 ಮಕ್ಕಳು ಇಂದು ಇರುವರು 12 ಮಕ್ಕಳು. ಎರಡು ಶಿಕ್ಷಕರು..! ನಾಗಾರಾಜ ಅಡಿಗರು ಆ ಶಾಲೆಯ ಮೊದಲ ವಿಧ್ಯಾರ್ಥಿ ಅಂತೆ. ಆವತ್ತಿನ ಕಾಲದಲ್ಲಿ ಶಿಕ್ಷಣದ ಮಹತ್ವ ವನ್ನು ಅರಿತ ಕ್ರಷ್ಣ ಅಡಿಗರು ಶಾಲೆಯನ್ನು ಪ್ರಾರಂಭಿಸಿದರು.. ಆವತ್ತು ಆ ಕಾರ್ಯಕ್ಕೆ ಕೈ ಹಾಕದೇ ಇದ್ದರೆ ಇವತ್ತು ಅವರ ಮಗ ರಮೇಶ್ ಭಟ್ರ ಹಾಗೇ ಕಿನ್ಮಾನ್ ಬೆಟ್ಟಿನ ರವಿ ಶೆಟ್ರ ಹಾಗೆ ಸಾಕಷ್ಟು ವಿದ್ಯಾರ್ಥಿಗಳು ಇಷ್ಟು ಎತ್ತರಕ್ಕೆ ಬೆಳೆಯುಲು ಅಸಾಧ್ಯ… ಅಂದು ಬ್ರಿಟಿಷ್ ರಿಂದ ಗುರುಕುಲ ಗಳು ಕಣ್ಮರೆಯಾದವು. ಇಂದು ಇಂಗ್ಲಿಷ್ ಮಾಧ್ಯಮದ ಮೇಲಿನ ಜನಗಳಿಗಿರುವ ಅತಿಯಾದ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ತನ್ನ ಅಸ್ತಿತ್ವವನ್ನು ‌ಕಳೆದುಕೊಳ್ಳುವ ಸ್ಥಿತಿಯನ್ನು ತಲುಪಿದೆ..ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಬಗ್ಗೆ ‌ಜನರಿಗಿರುವ ಸಂಕುಚಿತ ಭಾವನೆಯನ್ನು ಹೋಗಲಾಡಿಸುವುದು ಅನಿವಾರ್ಯ. ಸರ್ಕಾರದ ಯೋಜನೆಯ ಮೂಲಕ ಶಾಲೆಯನ್ನು ಅಭಿವೃದ್ಧಿಗೊಳ್ಳಿಸಬಹುದು‌ ಆದರೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅಳಿವಿನ‌ ಅಂಚಿನಲ್ಲಿರುವ ಆಲಡ್ಕ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅವಶ್ಯ.. ಶಾಲೆಯನ್ನು ಉಳಿಸಲು ಮುಂದಾಗಿ,58 ವರ್ಷಗಳ ಬಳಿಕ ವಾರ್ಷಿಕೋತ್ಸವ ‌ಮಾಡಿ,ತಾನು ಕಲಿತ ಶಾಲೆಯನ್ನು ಉಳಿಸುವುದಕ್ಕಾಗಿ ಹೋರಾಡುತ್ತಿರುವ ರಮೇಶ್ ಭಟ್ರ ರಿಗೆ ಸಹಕಾರ ನೀಡುವ

Thanks to Ramesh Bhat Nooji for sharing the success story of this government school. Please contact Ramesh Bhat Nooji at +91 948057472 and Ravi S Poojari (Head Master) at +91 9483458458 for further details.

Leave a Reply