Love and gratitude from Nidagundi government school children

ಹಸಿರು_ದೀಪಾವಳಿ, ಉಸಿರು, ಮಕ್ಕಳ ವನ … ಈ ರೀತಿ ನಮ್ಮ ಶಾಲೆ ಹಸಿರಾಗಲು ಕಾರಣರಾದವರು ಬರಹಗಾರ ಮಿತ್ರ Raju_Sankapal

ಎರಡು ಸಾವಿರ ರೂಪಾಯಿ ಮೌಲ್ಯದ ಗಿಡಗಳನ್ನ ನಮ್ಮ ಶಾಲೆಗೆ ಕೊಡಿಸಿದ್ದರು. ಅವರು ಕೊಡಿಸಿದ್ದ ಎಲ್ಲ ಗಿಡಗಳನ್ನ ನಾವು ಉಳಿಸಿಕೊಳ್ಳಲಾಗದ್ದಕ್ಕೆ ಕ್ಷಮೆ ಕೋರುತ್ತೇನೆ. ಸಾಧ್ಯವಾದ ಗಿಡಗಳನ್ನ ಪ್ರೀತಿಯಿಂದ ಬೆಳೆಸಿದ್ದೇವೆ. ರಾಜುರವರಿಗೆ ನಮ್ಮ ಮಕ್ಕಳ ಪರವಾಗಿ ತುಂಬು ಪ್ರೀತಿ, ಕೃತಜ್ಞತೆ.

ನನಗಿಂತಲೂ ಹೃದ್ಯ ಬರಹಗಾರರಾಗಿರುವ ರಾಜು ಸಂಕಪಾಳ ಗಡಿನಾಡಿನ ಅಪ್ಪಟ ಪ್ರತಿಭೆ. ಇಂದಿಗೂ ಅವರು ಪುಸ್ತಕಗಳನ್ನ ಪ್ರಕಟಿಸಿಲ್ಲ, ನಾವು ಪ್ರಕಟಿಸಿ ಏನೋ ಆದೆವು. ಇಂಥ ಅದೆಷ್ಟೋ ಪ್ರತಿಭೆಗಳು ಇನ್ನೂ ನಮ್ಮ ಸುತ್ತಲೇ ಅದೆಷ್ಟೋ ಇವೆ. ಅವರಿಗೆಲ್ಲ ಒಳಿತಾಗಲಿ.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಅಂಬೇಡ್ಕರ್ ನಗರ, ನಿಡಗುಂದಿ

Leave a Reply