Introduction to Math Fun

ಈ ಲೇಖನಗಳ ಸರಮಾಲೆಯನ್ನು ಓದುವ ಮೊದಲು…..

ಮಿತ್ರರೆ,

ಬೇರೆ ಬೇರೆ ಸಮಯದಲ್ಲಿ ಬರೆದ ಲೇಖನಗಳ ಸರಮಾಲೆ ಇಲ್ಲಿದೆ. ಗಣಿತದ ಸಮಸ್ಯೆ ನಿವಾರಿಸುವಲ್ಲಿನ ಒಂದೇ ರೀತಿಯ ಕೆಲವು ಲೇಖನಗಳು ಇಲ್ಲಿ ಕಾಣಬಹುದು.ಬೇರೆ ಬೇರೆ ಸಮಯದಲ್ಲಿ ಬರೆದ ಕಾರಣ, ನಾನು ಹೇಳುವ ರೀತಿ ಮತ್ತು ಕೆಲವು ಉಪಾಯಗಳು ಬೇರೆ ಇರಬಹುದು. ಹಾಗಾಗಿ ಅವುಗಳನ್ನು ಪುನಹ ಇಲ್ಲಿ ಹಾಕಿದ್ದೇನೆ.

ಕೊನೆಯಲ್ಲಿ, ಕೆಲವು ತಲೆ ತಿನ್ನುವ ಸಮಸ್ಯೆಗಳನ್ನು ಹಾಕಿದ್ದೇನೆ. ಮನೋರಂಜನೆ ಮತ್ತು ಮೆದುಳಿಗೆ ಕೆಲಸ ಕೊಡಲು ಅವುಗಳನ್ನು ಇಲ್ಲಿ ಬರೆದಿದ್ದೇನೆ.

ನಿಮಗೆ ಇಷ್ಟವಾದರೆ, ಇಲ್ಲಿನ ವಿಧಾನಗಳು ಉಪಯುಕ್ತ ಅನಿಸಿದರೆ, ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ, ನಿಮ್ಮ ಶಿಕ್ಷಕ ಮಿತ್ರರೊಂದಿಗೆ ಹಂಚಿಕೊಳ್ಳಿ. ನಾಲ್ಕು ಜನಕ್ಕೆ ಇದು ಉಪಯೋಗವಾದರೆ, ಸಂತೊಷ. ವಿದ್ಯಾರ್ಥಿಗಳಿಗೆ, ಈಗಲ್ಲವಾದರೂ, ಮುಂದೆ ಸಹಾಯಕವಾಗಬಹುದು.

ನಿಮ್ಮ ಯಾವುದೇ ಸಂದೇಹಗಳಿಗೆ ಯಾ ಸಲಹೆಗಳಿಗೆ ನನಗೆ ತಿಳಿಸಿದಲ್ಲಿ, ಉತ್ತರ ಬರೆಯುವೆನು.

rbshetty_bng@yahoo.com

ಮೊದಲಿಗೆ

ವಿದ್ಯಾರ್ಥಿಗಳು, ಶೀಘ್ರ ಗುಣಾಕಾರ ಕಲಿಯ ಬೇಕಿದ್ದರೆ, ಮನಸ್ಸಿನಲ್ಲೇ ಕೂಡಿಸಲು ಕಲಿತಿರಬೇಕು. ೩೮೮ + ೩೮೮ = ೭೭೬ ಎಂದು ಕೂಡಲೇ ಹೇಳುವಷ್ಟು ಪರಿಣಿತಿ ಪಡೆದಿರ ಬೇಕು.
ನಾನು ಮನಸ್ಸಿನಲ್ಲೇ ಕೂಡಿಸುವ ರೀತಿ ಈ ರಿತಿ ಇದೆ:

೩೮೮ + ೪೬೭ = ೩೮೮ + ೪೦೦ + ೬೦ + ೭ = ೭೮೮ + ೬೦ +೭ =೮೪೮ + ೭ = ೮೫೫
೩೮೮ + ೪೬೭. ಇದನ್ನು ಕೂಡಿಸಲು ಮೊದಲು ೩೮೮ ಕ್ಕೆ ೪೬೭ರ ೪೦೦ ನ್ನು ಮೊದಲು ಕೂಡಿಸುತ್ತೇನೆ –> ೭೮೮. ಇದಕ್ಕೆ ೪೬೭ ರ ೬೦ ನ್ನು ಕೂಡಿಸಿದಾಗ ೮೪೮ ಆಯಿತು. ೮೪೮ಕ್ಕೆ ೭ ನ್ನ್ನು ಸೇರಿಸಿದಾಗ ಸಿಗುವ ಕೊನೆಯ ಉತ್ತರ,

Leave a Reply