Group Discussions – May 31 2016

Milind M Raichur: ನಮ್ಮ ಭಾರತದ ಶಾಲೆಯಲ್ಲನ ಶಿಕ್ಷೆಯು ಯೋಗದ ಒಂದು ಆಸನ …ಮೆದುಳಿಗಾಗಿ
Nagesh TK: ಒಂದು ಶಾಲೆ ಅನೇಕ ವಿದ್ಯಾರ್ಥಿಗಳನ್ನು ನಾಳಿನ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತದೆ. ಆ ಶಾಲೆಯಲ್ಲಿ ಏನೇನಿರಬೇಕು, ಹೇಗಿರಬೇಕೆಂದು ತಿಳಿಸುವ ಸಣ್ಣ ಪ್ರಯತ್ನ ಇದು. ನಾನು ಈ ವಿಷಯದಲ್ಲಿ ಪರಿಣತನಲ್ಲ. ನನಗೆ ಅನಿಸಿದನ್ನು ತಿಳಿಸುವ ಪ್ರಯತ್ನವಷ್ಟೆ.

ಮೊತ್ತ ಮೊದಲಿಗೆ, ಅಲ್ಲಿ ಕಲಿಸುವ ಅಧ್ಯಾಪಕರಿಗೆ ಕಲಿಸುವ ಹುಮ್ಮಸ್ಸು ಇರಬೇಕು. ಹೊಟ್ಟೆ ಪಾಡಿಗೆ ಕೆಲಸ ಮಾಡುತ್ತಿದ್ದೇವೆ ಅನ್ನುವ ಭಾವನೆ ಇರಬಾರದು. ದೇಶ ಕಟ್ಟುವಲ್ಲಿ ಇವರೆಲ್ಲರ ಪಾತ್ರ ಹಿರಿದು. ಸರಕಾರ ಇವರನ್ನು ನಿರ್ಲಕ್ಷಿಸುವುದು ಮಾತ್ರ ದುರಂತ. ಪ್ರತಿಯೊಬ್ಬ ಉಪಾಧ್ಯಾಯರು ಸಹ, ಪ್ರತೀ ನಿಮಿಷವೂ ತಮ್ಮ ಮನಸ್ಸಿನಲ್ಲಿ ಇರಿಸಬೇಕಾದ ವಿಷಯ, ತಾವು ಮುಂದಿನ ಪ್ರಜೆಗಳನ್ನು ಬೆಳೆಸುವಂತಹ ಜವಬ್ದಾರಿ ಹೊತ್ತಿರುವವರು ಎಂದು.

ಅಧ್ಯಾಪಕರಿಗೆ ಸಾಮಾನ್ಯ ಜ್ಞಾನ ಇರಬೇಕು (ಜನರಲ್ ನಾಲೇಜ್). ಜಗತ್ತಿನಲ್ಲಿ, ತನ್ನ ಸುತ್ತ ಮುತ್ತ ಏನೇನು ಬದಲಾವಣೆ ಆಗುತ್ತಿದೆ ಅನ್ನುವ ತಿಳುವಳಿಕೆ ಇರಬೇಕು. ಮಕ್ಕಳ ಮುಂದಿನ ಅಭಿವೃದ್ಧಿಗಾಗಿ, ಅವರು ಏನೇನು ಮಾಡಬಹುದು ಅನ್ನುವ ತಿಳುವಳಿಕೆಯನ್ನು ಮಕ್ಕಳಿಗೆ ಕೊಡುವ ಜ್ಞಾನ ಅವರಲ್ಲಿ ಇರಬೇಕು. ತಮ್ಮ ರಾಜ್ಯದ ಉತ್ತಮ ಶಾಲೆಗಳ, ಕಾಲೇಜುಗಳ ಹೆಸರಿನ ಪರಿಚಯವಾದರೂ ಇರಬೇಕು. ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ಇಂಜನಿಯರಿಂಗ್ ಮಾಡುತ್ತಾನೆಂದರೆ, ನಮ್ಮ ರಾಜ್ಯದಲ್ಲಿರುವ ಉತ್ತಮ ಇಂಜನಿಯರಿಂಗ್ ಕಾಲೇಜುಗಳ ಹೆಸರು ಅವರಿಗೆ ಗೊತ್ತಿರ ಬೇಕು.

ಮಕ್ಕಳ ಮನೋ ವಿಕಾಸಕ್ಕೆ ಒತ್ತು ಕೊಡುವ, ಅವರನ್ನು ಹುರಿದುಂಬಿಸುವ, ಅವರನ್ನು ಪ್ರೋತ್ಸಾಹಿಸುವ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಶಕ್ತಿ, ಗುಣ ಅವರಲ್ಲಿ ಇರಲೇ ಬೇಕು. ” ಏ, ನಿನಗೆ ಗೊತ್ತಿಲ್ಲ, ನೀನು ದಡ್ಡ, ನಿನ್ನಿಂದಾಗದು” ಅನ್ನುವಂತಹ ತಾತ್ಸಾರದ ಮಾತು ಸಲ್ಲದು. ನೀವು ಆಡುವ ಮಾತು, ನಿಮ್ಮ ನಡೆ ಮಕ್ಕಳ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀಳುತ್ತದೆ. ಮಕ್ಕಳಿಗೆ ಬರೇ ಪಾಠ ಹೇಳಿಕೊಟ್ಟರೆ ಸಾಕೆ? ಅವರನ್ನು ಪ್ರಶ್ನೆ ಕೇಳಲು ಹುರಿದುಂಬಿಸಿ. ಬರೇ ಪಾಠ ಸಾಲದು. ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಬೇರೆ ಬೇರೆ ಕಾರ್ಯಕ್ರಮ ನಿರ್ವಹಿಸಿ. ವಾರೊಕ್ಕೊಮ್ಮೆ ಯಾ ತಿಂಗಳಿಗೆ ಎರಡು ಸಲ ಡಿಬೇಟ್ ನಡೆಸ ಬಹುದು. ಇಲ್ಲಿ ಚರ್ಚೆ ಇರಿಸ ಬಹುದು, ಅವರ ಅಭಿಪ್ರಾಯ ತಿಳಿಯುವ ಪ್ರಯತ್ನ ಮಾಡಬಹುದು. (ಹೆಣ್ಣು ಮಕ್ಕಳಿಗೆ ವಿದ್ಯೆ ಬೇಕೋ ಬೇಡವೋ ಅನ್ನುವುದು ಚರ್ಚೆಯಾದರೆ, ಹೆಣ್ಣು ಮಖ್ಖಳಿಗೆ ವಿದ್ಯಾಭ್ಯಾಸದ ಆವಶ್ಯಕತೆ ಇದೆ ಅನ್ನುವುದು ಅವರ ಅಭಿಪ್ರಾಯಗಳನ್ನು ತಿಳಿಸುವ ರೀತಿಯಾಗುತ್ತದೆ.ಇಂತಹ ದಿನಗಳಲ್ಲಿ, ಮಕ್ಕಳು ನೃತ್ಯ ಮಾಡಲಿ, ಛದ್ಮ ವೇಷ ಧರಿಸಲಿ, ಪುಟ್ಟ ನಾಟಕ ಮಾಡಲಿ, ಹಾಡು ಹೇಳಲಿ, ಒಗಟು ಹೇಳಲಿ, ಗಾದೆ ಹೇಳಲಿ. ಇದಕ್ಕೆ ಪ್ರೋತ್ಸಾಹ ನೀಡಿ. ಅವರ ತಪ್ಪುಗಳನ್ನು ತಿದ್ದಿ. ಶಾಲಾ ಮ್ಯಾಗಜೀನ್ ಮಾಡಿ. ಅದರಲ್ಲಿ ಮಕ್ಕಳು ಕಥೆ, ಲೇಖನ ಬರೆಯಲಿ, ಚಿತ್ರ ಬಿಡಿಸಲಿ. ಇದನ್ನು ಮುದ್ರಿಸ ಬೇಕಿಲ್ಲ. ಒಂದು ಪುಸ್ತಕದಲ್ಲಿ ಕೈಯಲ್ಲೇ ಬರೆಯಲಿ. ಇಂತಹ ಪ್ರಯತ್ನಗಳಲ್ಲಿ ಮಕ್ಕಳ ಸುಪ್ತ ಪ್ರತಿಭೆ ಹೊರ ಬರುತ್ತದೆ. ಅವರಲ್ಲಿ ಒಗ್ಗಟ್ಟೂ ಬರುತ್ತದೆ. ಮಕ್ಕಳಲ್ಲಿರುವ ಕೆಲವು ಕೌಶಲ್ಯವನ್ನು ಗಮನಿಸಿ. ಅವರು ಈ ನಿಟ್ಟಿನಲ್ಲಿ ಯೋಚಿಸಲು ಅವರಿಂದ ಎಲೆಯಿಂದ ಪೀಪಿ ಮಾಡಿಸಿ, ಕಾಗದದಲ್ಲಿ ಹಕ್ಕಿ ಮಾಡಿಸಿ, ಬೆಂಕಿ ಪೊಟ್ಟಣದಿಂದ ಬಂಡಿ ಮಾಡಿಸಿ, ತೆಂಗಿನ ಗರಿಯಿಂದ ವಾಚ್ ಮಾಡಿಸಿ. ಇದಕ್ಕೆ ನೀವು ಶಾಲಾ ಸಮಯ ವಿನಿಯೋಗಿಸ ಬೇಕಿಲ್ಲ. ಇಂತಹ ವಸ್ತುಗಳನ್ನು ಮನೆಯಿಂದ ಮಾಡಿತರಲು ಹೇಳಿರಿ.ಹಲವಾರು ಸಣ್ಣ ಸಣ್ಣ ವೈಜ್ಞಾನಿಕ ಪ್ರಯೋಗಗಳನ್ನು ಮಕ್ಕಳ ಕೈಯಿಂದ ಮಾಡಿಸಿ. ಅನೇಕ ಮಕ್ಕಳಿಗೆ ಗಣಿತವೆಂದರೆ ತಲೆ ನೋವು. ಗಣಿತದಲ್ಲಿರುವ ತಮಾಶೆಯನ್ನು ಅವರಿಗೆ ತೋರಿಸಿ. ಪಾಠ್ಯ ಪುಸ್ತಕದಲ್ಲಿರದ ಕೆಲವು ಸುಲಭೋಪಾಯಗಳನ್ನು ಕಲಿಸಿ ಕೊಡಿ. ಮಗ್ಗಿ (ಟೇಬಲ್ಸ್) ಕಲಿಯಲು ಸುಲಭ ಮಾರ್ಗ ಹೇಳಿ ಕೊಡಿ – ರಾತ್ರಿ ಮಲಗುವಾಗಲೋ, ರಸ್ತೆಯಲ್ಲಿ ನಡೆಯುವಾಗಲೋ ಮಗ್ಗಿಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಮಗ್ಗಿ ಕಲಿಯ ಬಹುದು.ವಾರಕ್ಕೆ ಎರಡು ಮೂರ ಸಲ ಆಟವಾಡಲು ಬಿಡಿ. ಬೇರೆ ಬೇರೆ ಆಟ ಆಡಲು ಬಿಡಿ. ನಿಮಗೆ ಬೇಕಾದ ಸವಲತ್ತುಗಳನ್ನು ತರಿಸಿ. ನಮ್ಮ ಸಮಾಜದಲ್ಲಿ ಇಂತಹ ಕೆಲಸ ಮಾಡಲು ಅನೇಕರು ತಯಾರಿದ್ದಾರೆ. ಮಕ್ಕಳಿಗಾಗಿ ಆಡುವ ಉಪಕರಣ, ಪುಸ್ತಕಗಳನ್ನು ಕೊಡುವವರು ಅನೇಕರಿದ್ದಾರೆ. ಅವರ ಸಹಾಯ ಪಡೆಯಿರಿ. ಇದರಲ್ಲಿ ಮುಜುಗುರ ಪಡುವ ಪ್ರಶ್ನೆ ಇಲ್ಲ – ನೀವು ನಿಮಗಾಗಿ ಸಹಾಯ ಕೇಳುತ್ತಿಲ್ಲ, ಸಮಾಜದ ಉದ್ದಾರಕ್ಕಾಗಿ ಸಹಾಯ ಕೇಳುತ್ತಿದ್ದೀರಿ.ಮಾಸ್ತರರುಗಳನ್ನು ನಾವು ಗುರುಗಳೆಂದು ಕರೆಯುತ್ತೇವೆ. ಗುರುವನ್ನು ದೇವರೆಂದು ಕರೆದು, ತಂದೆ ತಾಯಿಯರಷ್ಟೇ ಗೌರವದಿಂದ ಕಾಣುತ್ತೇವೆ. ಅದನ್ನು ಉಳಿಸಿಕೊಳ್ಳಿ. ನಿಮ್ಮ ಉದ್ಯೋಗದ ಬಗ್ಗೆ ನಿಮ್ಮಲ್ಲಿ ಹೆಮ್ಮೆ ಬೆಳೆಸಿಕೊಳ್ಳಿ.

Chandrakant Acharya: ಕೇವಲ ೧೦ ಪ್ರತಿಶತ ಈ ಬಗೆಯ ಶಿಕ್ಷಕರಿದ್ದರೂ, ನಮ್ಮ ಭಾರತದ ಭವಿಷ್ಯ ಭವ್ಯವಾಗುತ್ತದೆ!!!

Nagesh TK: ಇದಾರೆ ಸರ್ ಆದ್ರೆ ಅವರಿಗೆ ಅವರ ಕನಸುಗಳನ್ನು ಈಡೇರಿಸಲು ಸೌಲಭ್ಯಗಳು ಸಿಗದೆ ಅಸಾಯಕರಾಗಿದ್ದಾರೆ

Chandrakant Acharya: ನಾಗೇಶ್ ಸರ್ ಒಪ್ಪಿದೆ. ಆದರೆ ಪ್ರವಾಹದ ವಿರುದ್ಧ ಈಜಲು ಮನೋಸ್ಥೈರ್ಯ ಗಟ್ಟಿ ಬೇಕು.We, including our school teachers should come out of our comfort zones first!!!

Raghunandan: I am really sorry unable to login to skype from where I am today. Will surely get in touch moment I reach home.

Mallesh GN: ನಮ್ಮ ಘನ ಕರ್ನಾಟಕ ಸರ್ಕಾರ ಈಗಾಗಲೇ 30 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸಲು ಪಟ್ಟಿ ಸಿದ್ಧಪಡಿಸಿದೆ.ಆದೇಶ ಹೊರಬಿದ್ದರೆ ಪ್ರತಿ ಜಿಲ್ಲೆಗೆ ಅಂದಾಜು 600 ಶಾಲೆಗಳಂತೆ ವಿಲೀನಗೊಳ್ಳಲಿವೆ ಅರ್ಥಾತ್ ಮುಚ್ಚಲ್ಪಡುತ್ತವೆ.

Nagesh TK: ಮತ್ತೆ ನಿಮ್ಮ ಶಾಲೆಯನ್ನ ಎಲ್ಲರೂ ಮೆಚ್ಚುವಂತೆ ಹೇಗೆ ಮಾಡಿದ್ರಿ?ಬರೀ ಭಾಷಣ ಮಾಡಿದ್ರೆ ಸಾಲದು ಸರ್ ಅನುಷ್ಠಾನ ಅಗ್ಬೇಕುಅನ್ಯಥಾ ಭಾವಿಸಬೇಡಿ ನಾಲ್ಕು ತಿಂಗಳಿಂದ ಸತತವಾಗಿ ಗ್ರೂಪಿನ ಎಲ್ಲರೂ ಚರ್ಚೆ ಮಾಡಿದ್ದೇವೆ,ಆದ್ರೆ ಕಾರ್ಯಗತ ಆದ ಕೆಲಸಗಳಷ್ಟೆ?

Gajanan Akhila: ನಾನು ಹೇಳಿದ್ದು ಅದನ್ನೆ: ಮಾಡುವವರು ಕಡಿಮೆ ..ಹೇಳುವವರು ಜಾಸ್ತಿ…ಕೆಲಸ ಆಗಲು ಸಾದ್ಯನಾ? ನನ್ನ ವೈಯಕ್ತಿಕ ಅಭಿಪ್ರಾಯ…quality education ಕೊಟ್ಟರೆ…ಶಾಲೆ ..ಎಲ್ಲೆ ಇದ್ದರು..ಹುಡುಕಿ ಮಕ್ಕಳನ್ನು ಕಲಿಸುತ್ತಾರೆ.ಇಲ್ಲವಾದರೆ…ಮಕ್ಕಳನ್ನು ಹಿಡಿಯೊ /ಕೂಡಿ ಹಾಕೊ ಕಾರ್ಯಕ್ರಮ ಆಗತ್ತೆ….r u agree, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರು..ಶಾಲೆಗಾಗಿ ಹೋರಾಡುತ್ತದ್ದಾರೆ….ತುಂಬಾ ಶಾಲೆಗಳು…UN touchable …ಶಾಲೆಗಳಾಗಿ ರೂಪುಗೊಳ್ಳುತ್ತಿವೆ..

Girish Mudigere: Excellent news…..10 more computers delivered to two schools in Mangaluru from Infosys.Total 15 computers delivered through our team to 3 schools in Mangaluru, We are not donors……for sure

Rakesh Gowda: Great news sir,Now a days computer education is very essential, Every child has to know about computer. Pls provide in rural areas

Girish Mudigere: Lets try…..no time limit sir..please understand. Saturday four schools we are planning planting……mostly we will succeed

Rakesh Gowda: Sir what about june 4th prog, How many people going

Yogish: Excellent effort. Encouraging development Yes, of course the tree planting will be successful and we will give top priority to maintain the trees. Around 100 volunteers to Uttrahalli schools.

Rakesh Gowda: Girish sir , r u coming on Saturday. Nice if 100 people come.U r in u s or india

Yogish: I am in USA. I will be in India on June 15 : Girish, please give me the address of all the 3 schools where computers are delivered. Let’s add these success story in our website, These are just small beginning. Let’s move forward to achieve big success soon

Kalgudi Naveen: Yes! That is a good idea.Let every step be recorded, Along with the names of those who worked for it

Leave a Reply