An Amazing Facts About Chitradurga

Chitradurga-Fort-View

ದುರ್ಗದ ಸಂಕ್ಷಿಪ್ತ ಪರಿಚಯ

೧. ಏಳುಸುತ್ತಿನ ಅಭೇಧ್ಯ ಕೋಟೆಯಿರುವ ನಾಡು

೨. ರಾಜಾವೀರ ಮದಕರಿನಾಯಕರಾಳಿದ ನಾಡು

೩. ವೀರವನಿತೆ ಒನಕೆ ಓಬವ್ವನ ನಾಡು

೪. ರಾಜ್ಯದ ಏಕೈಕ ತಾಮ್ರದ ಗಣಿ ಇಂಗಳದಾಳ್ ಈ ಜಿಲ್ಲೆಯದ್ದು

೫. ಅತಿ ಹೆಚ್ಚು ಪವನ ವಿದ್ಯುತ್ ಉತ್ಪಾದಿಸುವ ಜಿಲ್ಲೆ

೬. ರಾಜ್ಯದಲ್ಲಿ ಅತಿ ಹೆಚ್ಚು ಚಳಿ ದಾಖಲಾಗಿರುವ ಜಿಲ್ಲೆ

೭. ಏಷ್ಯಾ ಖಂಡದಲ್ಲೆ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಖ್ಯಾತಿ ಈ ಜಿಲ್ಲೆಯದ್ದು

೮. ರಾಜ್ಯದ ಅತಿ ಹೆಚ್ಚು ಶೇಂಗಾ ಬೆಳೆಯುವ ಜಿಲ್ಲೆ.

೯. ರಾಜ್ಯದ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ

೧೧. ಅತಿ ಹೆಚ್ಚು ಅಡುಗೆ ಎಣ್ಣೆ ತಯಾರಿಸುವ ಮಿನಿ ಬಾಂಬೆ ಚಳ್ಳಕೆರೆ ಈ ಜಿಲ್ಲೆಯದ್ದು

೧೨. ಸುಪ್ರಸಿದ್ಧ ಮೊಳಕಾಲ್ಮೂರಿನ ಕಂಬಳಿ ನೇಯ್ಗೆ ಈ ಜಿಲ್ಲೆಯದ್ದು.

೧೩. ರಾಷ್ಟ್ರಕವಿ ಕುವೆಂಪು ರವರ ಗುರುಗಳಾದ ಪ್ರೊ. ಟಿ.ಎಸ್. ವೆಂಕಣ್ಣಯ್ಯ ರವರು ಹುಟ್ಟಿದ ನಾಡು.

೧೪. ರಾಜ್ಯದ ನಂಬರ್ ಒನ್ ಮುಖ್ಯಮಂತ್ರಿ ದಿ.ಎಸ್ ನಿಜಲಿಂಗಪ್ಪ ರವರು ಹುಟ್ಟಿದ ಜಿಲ್ಲೆ

೧೫. ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಐಕ್ಯಭೂಮಿ ಈ ಜಿಲ್ಲೆ

೧೬. ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲೊಂದಾದ ನಾಯಕನಹಟ್ಟಿ ಜಾತ್ರೆ ಈ ಜಿಲ್ಲೆಯದ್ದು

೧೭. ರಾಜ್ಯದಲ್ಲಿ ಅತಿ ಹೆಚ್ಚು ರಾಮಾಯಣದ ಉಲ್ಲೇಖವಿರುವ ಜಿಲ್ಲೆ

೧೮. ಜಟಾಯು ಪಕ್ಷಿ, ಮತ್ತು ಶ್ರವಣಕುಮಾರನ ಕರ್ಮಭೂಮಿ ಈ ಜಿಲ್ಲೆಯಲ್ಲಿದೆ.

೧೯. ಅತಿ ಹೆಚ್ಚು ಬುಡಕಟ್ಟು ಜನರಿರುವುದು ಈ ಜಿಲ್ಲೆಯಲ್ಲಿ

೨೦. ಅತಿ ಹೆಚ್ಚು ಬುಡಕಟ್ಟು ಆಚರಣೆಗಳು ನಡೆಯುವುದು ಈ ಜಿಲ್ಲೆಯಲ್ಲಿ

೨೧. ಅಶೋಕನ ಮೊಟ್ಟಮೊದಲ ಶಾಸನ ಈ ಜಿಲ್ಲೆಯದ್ದು.

೨೨. ಚಂದ್ರವಳ್ಳಿಯ ಕದಂಬರ ಮಯೂರವರ್ಮನ ಮೊಟ್ಟಮೊದಲ ಶಾಸನ ಈ ಜಿಲ್ಲೆಯದ್ದು

೨೩. ಫಿರಂಗಿಯಿಂದಲೂ ಭೇಧಿಸಲಾಗದ ಕೋಟೆಯಿರುವುದು ಈ ಜಿಲ್ಲೆಯಲ್ಲಿ

೨೫. ಪ್ರಸಿದ್ಧ ಮಠಗಳಲ್ಲೊಂದಾದ ಮುರುಘಾಮಠವಿರುವುದು ಈ ಜಿಲ್ಲೆಯಲ್ಲಿ

೨೬. ಅತಿ ದೊಡ್ಡ ಬಸವೇಶ್ವರರ ಶಿಲಾಮೂರ್ತಿ ಸ್ಥಾಪಿಸಲ್ಪಡುತ್ತಿರುವುದು ಈ ಜಿಲ್ಲೆಯಲ್ಲಿ

೨೮. ಜಯದೇವರಂತಹ ಶಿವ ಶರಣರು ಹರಸಿದ ಬೆಳೆಸಿದ ಜಿಲ್ಲೆಯಿದು

೨೯. ಅತಿ ಕಡಿಮೆ ಅಪರಾಧ ಪ್ರಕರಣ ಹೊಂದಿರುವ ಜಿಲ್ಲೆ

೩೦. ಜಾಗೋ ಭಾರತ್ ಮೊದಲ ಕಾರ್ಯಕ್ರಮ ನಡೆದದ್ದು ಈ ಜಿಲ್ಲೆಯಲ್ಲಿ

೩೧. ಸರ್ ಎಂ ವಿಶ್ವೇಶ್ವರಯ್ಯ ನವರ ಮೊದಲ ಅಣೆಕಟ್ಟಿನ ಪರಿಕಲ್ಪನೆಯಾದ ವಾಣಿವಿಲಾಸ ಸಾಗರ ಈ ಜಿಲ್ಲೆಯದು.

೩೨. ರಾಜ್ಯದ ಏಕೈಕ ಬಯಲು ರಂಗಮಂಟಪ ಇರುವುದು ಈ ಜಿಲ್ಲೆಯಲ್ಲಿ

೩೩.ಚಿ ತ್ರರಂಗದಲ್ಲಿ ಸರ್ವಕಾಲಿಕ ದಾಖಲೆ ಬರೆದ ನಾಗರಹಾವು, ಕಲ್ಲರಳಿ ಹೂವಾಗಿ ಚಿತ್ರದ ಚಿತ್ರೀಕರಣ ನಡೆದದ್ದು ಈ ಜಿಲ್ಲೆಯಲ್ಲಿ

೩೪. ಅತಿಹೆಚ್ಚು ಮಾಸ್ತಿಕಲ್ಲು, ವೀರಗಲ್ಲು ಗಳು ಪತ್ತೆಯಾದ ಜಿಲ್ಲೆಯಿದು.

೩೫. ಭಾರತೀಯ ವಿಜ್ಞಾನ ಸಂಸ್ಥೆ ಇರುವುದು ಈ ಜಿಲ್ಲೆಯಲ್ಲಿ

೩೬. ವಿಸ್ಮಯದ ಹಿಮವತ್ಕೇದಾರ ಇರುವುದು ಈ ಜಿಲ್ಲೆಯಲ್ಲಿ

Leave a Reply