ಯಾಕೀ ತಲೆ ಬಿಸಿ

ಯಾಕೀ ತಲೆ ಬಿಸಿ

ರಾಮ ಮತ್ತು ಕೃಷ್ಣರಿಬ್ಬರೂ ಗೆಳೆಯರು. ಇರುವುದು ಬೇರೆ ಬೇರೆ ಊರಲ್ಲಿ.
ಒಂದು ದಿನ ರಾಮನಿಗೆ ಕೃಷ್ಣನ ಊರಲ್ಲಿ ಕೆಲಸ, ಕೃಷ್ಣನಿಗೆ ರಾಮನ ಊರಲ್ಲಿ. ಅಕಸ್ಮಾತಾಗಿ, ಇಬ್ಬರೂ ಒಂದೇ ಹೋಟೇಲಿಗೆ ಒಂದೇ ಸಮಯಕ್ಕೆ ಬರುತ್ತಾರೆ. ಮಾತನಾಡುತ್ತಾ, ಇಬ್ಬರೂ ಒಂದೇ ಸಮಯಕ್ಕೆ ತಮ್ಮ ಊರನ್ನು ಬಿಟ್ಟ ವಿಷಯ ತಿಳಿಯುತ್ತದೆ. ತಿಂಡಿ ಕಾಫಿ ಮುಗಿಸಿ ಕೈ ಕುಲುಕುತ್ತಾ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಹೊರಡುತ್ತಾರೆ.
ಸಾಯಂಕಾಲ, ರಾಮನಿಗೆ ಕೃಷ್ಣನ ಕರೆ, “ ಈಗತಾನೆ ಬಂದು ಮುಟ್ಟಿದೆ.”
ರಾಮ ತನ್ನ ಕೈ ಗಡಿಯಾರ ನೋಡುತ್ತಾ, “ನಾನು ಬಂದು ಎರಡೂವರೆ ಘಂಟೆಯಾಯಿತು. ನಿನ್ನ ಕಾರನ್ನು ಎಷ್ಟು ವೇಗದಲ್ಲಿ ಓಡಿಸಿದ್ದು ಮಾರಾಯಾ?” ಅನ್ನುತ್ತಾನೆ.
“ಸರಾಸರಿ ಬರೇ ನಲ್ವತ್ತು ಕಿಲೋಮೀಟರ್ ವೇಗದಲ್ಲಿ, ನೀನು?”
“ನಂದು ಸರಾಸರಿ ಅರುವತ್ತು ಕಿಲೋಮೀಟರ್ ವೇಗದಲ್ಲಿ” ಅನ್ನುತ್ತಾನೆ ರಾಮ.
ನಾನು ಸ್ವಲ್ಪ ತರಳೆ ಮನುಷ್ಯ. ಅವರಿಬ್ಬರ ಊರಿನ ನಡುವಿನ ಅಂತರ ಎಷ್ಟು ಎಂದು ಹೇಳ ಬಲ್ಲಿರಾ?
ಲೆಕ್ಕ ಕಷ್ಟವಿಲ್ಲ, ಕಾಗದದ ಸಹಾಯವಿಲ್ಲದೆಯೂ ಮಾಡ ಬಹುದು.

Leave a Reply