ಮೋಜಿನ ಗಣಿತ – ೯ ರ ಮಹಿಮೆ

ಮೋಜಿನ ಗಣಿತ – ೯ ರ ಮಹಿಮೆ

೬೪೫೩ * ೯೯೯೯ = ?
೬೭೮೫೪೨೯೮೭ x ೯೯೯೯೯೯೯೯೯ = ?
೭೫೩೨೮೪೬*೯೯೯೯೯೯೯ = ?

’*’ ಇದು ಗುಣಾಕಾರದ ಚಿಹ್ನೆ ಎಂದು ಹೇಳಬೇಕಿಲ್ಲ ತಾನೆ?
ಮೇಲಿನ ಗುಣಾಕಾರ ನೋಡಿದರೆ, ಎದೆ ಡಬ…ಡಬ…. ಅನ್ನುತ್ತಿದೆಯೇ? ಏನಿಲ್ಲ, ಬಹಳ ಸುಲಭದಲ್ಲಿ ಉತ್ತರ ಹೇಳಬಹುದು
ಮೊದಲಿನ ಲೆಕ್ಕದಲ್ಲಿ ಸಂಖೆ ೬೪೫೩ ರಲ್ಲಿ ೬, ೪. ೫ ಮತ್ತು ೩ ಅನ್ನುವ ನಾಲ್ಕು ಅಂಕೆಗಳಿವೆ. ಹಾಗೆಯೇ ಅದಕ್ಕೆ ಗುಣಿಸುವ ನಾಲ್ಕು ೯ ಗಳು ಇವೆ. ಎರಡನೆಯ ಲೆಕ್ಕದಲ್ಲಿ ಗುಣ್ಯ ಮತ್ತು ಗುಣಕಗಳಲ್ಲಿ ೯ ಅಂಕೆಗಳಿವೆ, ಮೂರನೆಯ ಲೆಕ್ಕದಲ್ಲಿ ಗುಣ್ಯ ಮತ್ತು ಗುಣಕದಲ್ಲಿ ೭ ಅಂಕೆಗಳಿವೆ.
ಹೀಗೆ ಗುಣ್ಯ ಮತ್ತು ಗುಣಕದಲ್ಲಿ ಅಂಕೆಗಳ ಸಂಖೆ ಒಂದೇ ಇದ್ದಲ್ಲಿ ಮತ್ತು ಯಾವುದಾದರೂ ಒಂದು ಅಂಕೆ ೯ ರ ಗುಂಪಾಗಿದ್ದರೆ, ಕೆಲವೇ ಸೆಕೆಂಡುಗಳಲ್ಲಿ ಉತ್ತರ ಬರೆಯಬಹುದು.
ಒಂದಾಣೆ ಗಣಪತಿ ಮೂರ್ತಿಗೆ, ಒಂದು ರುಪಾಯಿ ಅಗರಬತ್ತಿ ಅನ್ನುವ ಮಾತಿದೆ. ಹಾಗೆಯೇ ಈ ಸುಲಭದ ಲೆಕ್ಕಕ್ಕೆ ಮಾರುದ್ದದ ಪೀಠಿಕೆಯಾಯಿತು
೬೪೫೩ * ೯೯೯೯ = ?
ಮೊದಲು ೬೪೫೩ರಲ್ಲಿ ೧ ಕಡಿಮೆಮಾಡಿ ಎಡಬದಿಗೆ ಬರೆಯಿರಿ
೬೪೫೨
ಮೇಲಿನ ಸಂಖೆಯ ಬಲ ಬದಿಗೆ, ಮೊದಲ ಸಂಖೆಯ ಪ್ರತೀ ಅಂಕೆಯನ್ನು ೯ ರಿಂದ ಕಳೆದು ಬರೆಯಿರಿ
೯ – ೬ = ೩, → ೬೪೫೨ ೩
೯ – ೪ = ೫. → ೬೪೫೨ ೩೫
೯ – ೫ = ೪, → ೬೪೫೨ ೩ ೫ ೪
೯ – ೨ = ೭ → ೬೪೫೨ ೩ ೫ ೪ ೭
೬೪೫೨೩೫೪೭
೬೪೫೩ * ೯೯೯೯ = ೬೪೫೨೩೫೪೭

ಸಂಶಯವಿದ್ದರೆ, ಪರೀಕ್ಷಿಸಿ
678542987*999999999 = ?
678542986 ಇನ್ನು ಪ್ರತೀ ಅಂಕೆಯನ್ನು 9 ರಿಂದ ಕಳೆದು ಬರೆಯಿರಿ
678542986321457013
678542987*999999999 = 678542986321457013

ಇನ್ನೊಂದು ಲೆಕ್ಕ ನಾನು ವಿಸ್ತರಿಸಿ ಹೇಳುವ ಅಗತ್ಯವಿದೆಯೇ?
೭೫೩೨೮೪೬*೯೯೯೯೯೯೯ = ೭೫೩೨೮೪೫೨೪೬೭೧೫೪
ನೆನಪಿಡಿ, ಗುಣ್ಯ ಅಥವಾ ಗುಣಕದಲ್ಲಿ ಎಷ್ಟು ಅಂಕೆಗಳಿವೆಯೋ, ಅಷ್ಟೇ ಅಂಕೆಯ ೯ ಇರಬೇಕು

Leave a Reply