ಮಗ್ಗಿ… ಮಗ್ಗಿ… ಮಗ್ಗಿ…

ಮಗ್ಗಿ… ಮಗ್ಗಿ… ಮಗ್ಗಿ…

ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ, ಹೆಚ್ಚಿನ ವಿದ್ಯಾರ್ಥಿಗಳ ತಲೆ ನೋವು ಮಗ್ಗಿ. ಮಾಸ್ತರರು ಮಧ್ಯದಲ್ಲಿ ಮಗ್ಗಿ ಕೇಳಿದ ಕೂಡಲೇ ಉತ್ತರ ಕೊಡ ಬೇಕು, ತಪ್ಪಿದರೆ ಏಟು.
ಕೆಳಗೆ ಕೊಟ್ಟಿರುವ ವಿವರಣೆ ದೊಡ್ಡದಿದ್ದರೂ, ಬಹಳ ಸುಲಭವಾಗಿ ಮಗ್ಗಿ ಹೇಳಬಹುದು. ಇದಕ್ಕೆ ಸ್ವಲ್ಪ ಅಭ್ಯಾಸದ ಅಗತ್ಯವಿದೆ.
11 x 11 ರಿಂದ 19 x 19 ರ ಮಗ್ಗಿ ಕಲಿಯಲು ಸುಲಭ ಉಪಾಯ ಇಲ್ಲಿದೆ (ನಾನು ಕಲಿಯುವಾಗ ಇದು ಗೊತ್ತಿಲ್ಲದೇ ಹೋಯಿತೇ)
ಇಲ್ಲಿ ಗಮನಿಸಿ, ಎರಡು ಅಂಕೆಗಳ ಸಂಕೆಯ (ಗುಣ್ಯ ಮತ್ತು ಗುಣಕಗಳ) ಮೊದಲ ಅಂಕೆ 1(೧) ಆಗಿರಲೇ ಬೇಕು.
ಉದಾಹರಣೆ ಸಮೇತ ಸುಲಭೋಪಾಯ ನೋಡೋಣ:
೧೪ x ೧೨ (14 x 12)
ಮೊದಲ ಸಂಕೆಯ ೧೪ (14) ಕ್ಕೆ ಎರಡನೆಯ ಸಂಕೆಯ (೧೨ – 12 ರ) ಏಕಸ್ಥಾನದ ಅಂಕೆ ಕೂಡಿಸಿ. ಅಂದರೆ ೧೪ +೨ = ೧೬ (14 + 2 = 16). ಇದಕ್ಕೆ ೧೦(10) ರಿಂದ ಗುಣಿಸಿ ೧೬೦ (160) ಆಯಿತು
(ಮನಸ್ಸಿನಲ್ಲೇ ೧೪ + ೨ ಅಂದಾಗ ೧೬ ರ ಜೊತೆ ೧೬೦ ಬರಬೇಕು).
ಈ ನೂರ ಅರ್ವತ್ತಕ್ಕೆ, ಏಕ ಸ್ಥಾನಗಳನ್ನು ಗುಣಿಸಿ ಕೂಡಿಸಬೇಕು.
೪ x ೨ = ೮. ೧೬೦ + ೮ =೧೬೮. ಇದು ಉತ್ತರ (4 x2 = 8, 160 + 8 = 168)
ಇನ್ನೊಂದು ಉದಾಹರಣೆ ನೋಡೋಣ
೧೮ x ೧೨
೧೮ ಕ್ಕೆ ೨ ಕೂಡಿಸಿದರೆ ಇಪ್ಪತ್ತು, ಅಂದರೆ ಎರಡು ನೂರು. ೮ ಗುಣಿಸು ೨ ಅಂದರೆ ೧೬. ೨೦೦ ಮತ್ತು ೧೬ ಎರಡುನೂರ ಹದಿನಾರು.
19 x 19
19 + 9 = 28 ಅಂದರೆ 280. ಇದಕ್ಕೆ 81 (9 x 9 =81) ಕೂಡಿಸಿದರೆ 361 ಉತ್ತರ
* * *
ಇನ್ನು ೨೧ x ೨೧ ರಿಂದ ೨೯ x ೨೯ ನೋಡುವ. (21 x 21 to 29 x 29)
ಉದಾಹರಣೆ ೨೮ x ೨೭
೨೮ + ೭ = ೩೫. ಇದಕ್ಕೆ ಎರಡರಿಂದ ಗುಣಿಸಿ ೭೦. ಹತ್ತು ಪಟ್ಟು ೭೦೦. ಇದಕ್ಕೆ ೫೬ (೮ x ೭ = ೫೬) ಕೂಡಿಸಿ ೭೫೬ ಉತ್ತರ
ಇನ್ನೊಂದು ಉದಾಹರಣೆ: 22 x 23
22 ಮತ್ತು 3 = 25. ಇದು 500 ಆಗುವುದು (25 x 2 x10 = 500). 500 ಕ್ಕೆ 6 ಸೇರಿಸಿದರೆ ಉತ್ತರ 506

೦೧ ೦೯ ೨೦೧೬

Leave a Reply