Honoring SSLC Passed Students

ಪ್ರಸಕ್ತಸಾಲಿನಲ್ಲಿ ( ಈ ವರ್ಷ) ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಮಕ್ಕಳಿಗೆ ಮತ್ತು ಅವರ ಪೋಷಕರ ಗಮನಕ್ಕೆ: ಇದೀಗ ತಾನೇ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕನ್ನಡಾಂಬೆಯ ಹೆಮ್ಮೆಯ ಕುವರ ಕುವರಿಯರಿಗೆ ಕಲಾಕುಂಚ ದ ಹಾರ್ದಿಕ ಅಭಿನಂದನೆಗಳು.

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆಗಳಿಂದ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿ, ಒಟ್ಟು ಅಂಕ 625 ಕ್ಕೆ 600 ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ನೀಡಿ ದಾವಣಗೆರೆಯಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಹಾಗೆಯೇ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 120 ರಿಂದ 124 ರವರೆಗೆ ಅಂಕ ಗಳಿಸಿದ ಮಕ್ಕಳಿಗೆ “ಕನ್ನಡ ಕುವರ/ ಕನ್ನಡ ಕುವರಿ” ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ. ಸಾಮಾಜಿಕ, ಶೈಕ್ಷಣಿಕ, ಸೇವಾ ಮನೋಭಾವ, ಕಾಳಜಿ ಉಳ್ಳವರು ಹೆಚ್ಚಿನ ಗುಂಪುಗಳಿಗೆ ಶೇರ್ ಮಾಡಿರಿ.

:- ಸಾಲಿಗ್ರಾಮ ಗಣೇಶ್ ಶೆಣೈ, ಸಂಸ್ಥಾಪಕರು, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ.
ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ದಾವಣಗೆರೆ, ಸಾಲಿಗ್ರಾಮ.
+91 9901122728
+91 9539732777

Leave a Reply