Group Discussions March 2016 – 4 of 6

Girish Mudigere: Good story Abhi Gowda….. we can relate to school admissions and support them…..mother should be supported by government healthcare

One more group necessary to work on Government Public health care system

Lets focus on schools here

Abhi Gowda: Sir actually only our govt is showing so many crores released for education but o%improvements is going on

Prasanna: topics were optional to the students(or teachers/crp) as though competition held for the first time. It is to attract the public and parents towards gvt schools .
Many schools organised the competition as English fest at their schools sir.

Yogish: I was searching for Tulu English dictionary (now mangalore university is offering 1 year diploma course in Tulu) and found scanned copy of dictionary printed in 1886 by Basel Mission Mangalore (German Missionary Society started in 1815). Thrilled to see this piece of historical evidence. This dictionary is available in university of Toronto library. Just downloaded 700 pages of dictionary for my reference for my Tulu work.

Now Stanford university is proposed to decode(Hexadecimal code) the Tulu scripts.
Girish Mudigere: Every language needs to be boosted

Kiran Kumar: http://www.schooleducation.kar.nic.in/schooladoption.htm
Link for school adoption details.

Girish Mudigere: Bhimanagouda sir asked yesterday

I passed above link to Bhimanagouda sir personally to his inbox

Linnet D Silva: Today for SDMC training people came from very interior villages. None of them attended for training earlier. DEEKSHA is really satisfied for our great effort.

Yogish: Girish, all the previous discussions are now uploaded in to website (in text format, just cut and paste)

Yogish: Did anyone tried courses in nptel.ac.in ?. This is funded by MHRD India. Just watching CMOS analog VLSI design video course. Little boring lecture. I like interactive course.

I think this site is mainly for engineering courses. IIT professors are taking all the classes.

Linnet D Silva: Good effort by teacher pasha. At least one photo to view of children please.
Yogish: http://developschools.org/links-references/links-related-to-public-schools-and-education please visit this page and also suggest useful website related to schools or education

Dr Naveen: The Damage Done By Indian Schools http://www.huffingtonpost.in/nazreen-fazal/an-indictment-of-the-indi_b_9416416.html

Yogish: Thank you Nagesh Sir. Hope it will be implemented properly with right monitoring team in place. Most of the time only 10% of these announcements will be implemented.

Nagesh TK: Yogish sir its from Karnataka govt yesterday announced

Yogish: Following proposal in Karnataka budget is very bad, because it will benefit only the rich plantation owners.

In a major relief to planters, the budget proposed to abolish agriculture income tax and it would benefit coffee, tea and rubber and other plantation crop growers.

Abhi Gowda added MUST Preethi Gowda

Yogish: Following budgetary announcement will hurt govt schools:

Process of reimbursement of expenditure to private schools admitting students under the Right to Education Act.

Following is good announcement .

Supplementary teaching will be arranged during vacations for students with poor learning achievements in Government schools.

Girish Mudigere: added Sri Harsha and Abhiram MI

Welcome Mr Sri Harsha and Mr Abhiram ….Both are Engineers working in USA in Fiat Chrysler cars.

Both are eager to help Schools around Mysuru and all others too

Thank you team good discussion …..Abhi sir, thanks adding new member please introduce …..Maintenance of thousands of schools is tough task especially in current environment ….But if few of us help their administration sure it helps…..Ramachandra Shetty Sir, group cannot spend time on outside schools, kindly do not post

Linnet D Silva: New Education Policy is getting shaped. We have our say space. Any one is following it can share their views. May be we can focus on primary education.
Please think of north Karnataka.

Girish Mudigere: Education policy link please share if you have

Linnet D Silva: Mhrd.gov.in/nep-new

Girish Mudigere: Kashi sir….good project….is it free for few Government School kids

Sri Harsha: Girish sir can you add Sridhar to this group
He is my friend and is willing to help

Girish Mudigere: Sure Sri Harsha…you can also add….kindly give brief introduction………. added Sridhar

Sri Harsha: Sridhar is from Bangalore works at ford USA ,he has a John Deere dealership back in India and has good contacts that could be of great help

Sri Harsha: Am not a group admin so please add sir
Girish Mudigere: Bhimanagouda left. Conveyed thanks to Bhimanagouda sir who left team

Girish Mudigere: Had nice discussion with Yogish.
1. We need to list do’s and dont’s for the group
2. Focus more on development of Government Schools
3. Orient existing members and new members

Mahesh Gowda: #ವೀಕೆಂಡ್ #ಮೀಟಿಂಗ್ ಬನ್ನಿ ಭಾಗವಹಿಸಿ ಸೌಲಭ್ಯಗಳಿಲ್ಲದ ಬಡ ಕೂಲಿಕಾರ್ಮಿಕರ ಮನೆಗಳ ಕಡೆ ಹೋಗೋಣ ಬನ್ನಿ ನಮ್ಮ ವೀಕೆಂಡ್ ಮೀಟಿಗ್ನಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಕರೆ ಮಾಡಿ.
ಚಾಪೆ ಹಾಗೂ ಬೆಚ್ಚನೆಯ ಹೊದಿಕೆ ವಿತರಣೆ ಮಾಡೋಣ.ಅವರ ನೋವು ನಲಿವಿನ ಜೊತೆ ಅವರ ಮಾತನ್ನು ಆಲಿಸೋಣ ಅವರೊಡನೆ ಕೆಲಕಾಲ ಕಳೆಯೋಣ ಆ ಮನೆಯ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸೋಣ .
#ಆಸಕ್ತಿ #ಉಳ್ಳವರು ಕರೆ ಮಾಡಿ – 9164881858 ಸ್ಥಳ- ಲಗ್ಗೆರೆ. ಬೆಂಗಳೂರು ದಿನಾಂಕ 27-3-2016
#ವೀಕೆಂಡ್ with #ಮಾತೃಭೂಮಿ www.mathrubhoomi. org

https://m.facebook.com/mathrubhoomisevafoundation/

Abhi Gowda: Good job Mahesh sir teaching to slum children’s..

Girish Mudigere: 50 ಚಾಪೆ ಹಾಗೂ ಬೆಚ್ಚನೆಯ ಹೊದಿಕೆ

50 sets of mat and bedspreads being donated to needy persons living in slums. They collected 11000 from youth who were spending money for parties….

We appreciate intent of Matrubhumi Mahesh, Abhi Gowda and team members.

We encourage teaching kids but do not encourage donations and money.

Sorry….Mahesh avare
Abhi Gowda: Dear sir 50 sets of mat and bed spreads are donated by our senior member ramesh kumar sirke sir and team ,all thanks to go to our ramesh kumar sirke sir and team

Girish Mudigere: Please provide details of today’s teaching to slum kids in the evening. Donations photo beda…..teaching photos kodi later….bye

Kashi: Dear girish sir. For Govt school kids -free entry
Planned 150 Govt school children. 100 from Pvt school from karnataka state

Girish Mudigere: Excellent Kashi Sir Really appreciate your efforts to help government school kids. High Regards Sir….keep up
Kindly send few photos of Government school kids sir….Many gets inspired by your project

RaviRaj: ಪ್ರೌಢಶಾಲೆ, ಪ.ಪೂರ್ವ ಶಿಕ್ಷಣ ವಿಲೀನಕ್ಕೆ ಮುನ್ನುಡಿ. Mar 20,
ಕ್ರಿಯಾ ಯೋಜನೆ ರೂಪಿಸಲು ಬಜೆಟ್‌ನಲ್ಲೇ ಪ್ರಸ್ತಾಪ-
* ಶಿವರಾಮ್ ಬೆಂಗಳೂರು

ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ ಆಡಳಿತ ಹಾಗೂ ಕಾರ್ಯ ವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಸರಕಾರ ಈ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸುವ ಮೂಲಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ವಿಲೀನಕ್ಕೆ ಮುಂದಡಿಯಿಟ್ಟಿದೆ.

ಆರ್‌ಟಿಇ ಕಾಯಿದೆ ಪ್ರಕಾರ, 1ರಿಂದ 8ನೇ ತರಗತಿಯನ್ನು ಒಂದು ಶೈಕ್ಷಣಿಕ ಘಟಕ ಹಾಗೂ 9ರಿಂದ 12ನೇ ತರಗತಿಯನ್ನು ಮತ್ತೊಂದು ಶೈಕ್ಷಣಿಕ ಘಟಕವನ್ನಾಗಿ ಮಾಡುವುದು ಸರಕಾರದ ಉದ್ದೇಶ. ಈ ನಿಟ್ಟಿನಲ್ಲಿ 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಸೇರಿಸುವುದರ ಜತೆಗೆ, 9, 10, 11 ಮತ್ತು 12ನೇ ತರಗತಿಗಳನ್ನು ಮತ್ತೊಂದು ಘಟಕ ವ್ಯಾಪ್ತಿಗೆ ತರುವುದರ ಮೂಲಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿಲೀನಗೊಳಿಸುವುದು ಈ ಕಾರ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆದರೆ, ಪ್ರಗತಿಪರ ರಾಜ್ಯವಾದ ಕರ್ನಾಟಕ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಒತ್ತಡಕ್ಕೆ ಮಣಿದು ಇಂತಹ ನಿರ್ಧಾರ ಕೈಗೊಳ್ಳುವ ಬದಲು ರಾಜ್ಯಕ್ಕೆ ಪ್ರತ್ಯೇಕವಾದ ಸ್ವತಂತ್ರ ಶಿಕ್ಷಣ ನೀತಿ ಜಾರಿಗೆ ತರಬೇಕು. 1ರಿಂದ 4ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ವಸತಿ ಪ್ರದೇಶ ಅಥವಾ ಹಳ್ಳಿ ಪ್ರದೇಶಗಳಲ್ಲಿಯೇ ಉಳಿಸಿಕೊಳ್ಳುವ ಮೂಲಕ, 5ರಿಂದ 12ನೇ ತರಗತಿ ವರೆಗಿನ ಶಿಕ್ಷಣವನ್ನು ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಸುಸಜ್ಜಿತವಾದ ಶಾಲೆಗಳಲ್ಲಿ ನೀಡುವುದರಿಂದ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಹೆಚ್ಚಿನ ದೂರ ಹೋಗುವ ಪ್ರಮೇಯವೂ ತಪ್ಪಲಿದೆ. ಅಲ್ಲದೆ, ಮಕ್ಕಳು ಮಧ್ಯದಲ್ಲಿ ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದಾಗಿದೆ ಎಂದು ಶಿಕ್ಷಣ ತಜ್ಞರು ಸಲಹೆ ಮಾಡುತ್ತಾರೆ.

ಕೇಂದ್ರೀಯ ಅಥವಾ ನವೋದಯ ಶಾಲೆಗಳ ಮಾದರಿಯಲ್ಲಿ ನಮ್ಮ ಸರಕಾರಿ ಶಾಲೆಗಳಲ್ಲೂ ಮೂಲಭೂತ ಸೌಲಭ್ಯ ಕಲ್ಪಿಸಿ, ನುರಿತ ವಿಷಯವಾರು ಶಿಕ್ಷಕರನ್ನು ನೇಮಿಸುವುದರಿಂದ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೆ, ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡಲು ಸಹಕಾರಿಯಾಗಲಿದೆ ಎಂದು ಅವರು ಹೇಳುತ್ತಾರೆ.

6 ರಿಂದ 14 ವರ್ಷದೊಳಗಿನ (8ನೇ ತರಗತಿವರೆಗಿನ) ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದರ ಜತೆಗೆ, ಗುಣಾತ್ಮಕ ಹಾಗೂ ಸೃಜನಾತ್ಮಕ ಶಿಕ್ಷಣ ನೀಡಬೇಕೆಂಬುದು ಆರ್‌ಟಿಇ ಕಾಯಿದೆಯ ಧ್ಯೇಯ. 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ತಂದಾಗ ಅಲ್ಲಿ ಆ ಮಕ್ಕಳಿಗೆ ಬೋಧನೆ ಮಾಡುವಂತಹ ಬಿ.ಇಡಿ ಮಾಡಿದ ಅರ್ಹ ಶಿಕ್ಷಕರಿರಬೇಕು. ಅಲ್ಲದೆ, ಪ್ರೌಢ ಶಿಕ್ಷಣವನ್ನು 12ನೇ ತರಗತಿವರೆಗೆ ವಿಸ್ತರಿಸುವ ಪ್ರಶ್ನೆ ಎದುರಾದಾಗ, ಆ ಮಕ್ಕಳಿಗೂ ಪಾಠ ಮಾಡುವಂತಹ ಬೋಧನಾ ಸಾಮರ್ಥ್ಯ ಶಿಕ್ಷಕರಿರಬೇಕಾಗುತ್ತದೆ. ಇದರ ಭಾಗವಾಗಿಯೇ ಈಗಾಗಲೇ ಪಿಯು ಉಪನ್ಯಾಸಕರಿಗೂ ಬಿ.ಇಡಿ ಕಡ್ಡಾಯಗೊಳಿಸಲಾಗಿದೆ. ಆದರೆ, ಪ್ರಯೋಗಾಲಯ, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬ ಬಗ್ಗೆ ಪರಾಮರ್ಶೆ ನಡೆಸಬೇಕಿದೆ. ಮೂಲಭೂತ ಹಾಗೂ ಶೈಕ್ಷಣಿಕ ವಿಚಾರಗಳ ಬಗ್ಗೆ ಮಾನಸಿಕ ಸಿದ್ಧತೆ ನಡೆಸದೆಯೇ ಸರಕಾರ ಏಕಾಏಕಿ ವಿಲೀನ ಪ್ರಕ್ರಿಯೆ ಆರಂಭಿಸುವುದರಿಂದ ಅದು ಶಿಕ್ಷಣ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಶಿಕ್ಷಣ ತಜ್ಞರು ಸೂಚ್ಯವಾಗಿ ಸರಕಾರವನ್ನು ಎಚ್ಚರಿಸುತ್ತಾರೆ.

●●ವಿಲೀನ ಪ್ರಕ್ರಿಯೆ ಏಕೆ?

ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತವು ವಿಶ್ವ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕಾಗುತ್ತದೆ. 2030ರ ಸುಸ್ಥಿರ ಅಭಿವೃದ್ಧಿ ಗುರಿಯನ್ವಯ ಪ್ರೌಢ ಶಿಕ್ಷಣವನ್ನು 12ನೇ ತರಗತಿವರೆಗೆ ವಿಸ್ತರಿಸಬೇಕಿದೆ. ಸರ್ವ ಶಿಕ್ಷಾ ಅಭಿಯಾನದಡಿ 1ರಿಂದ 8ನೇ ತರಗತಿ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸುತ್ತಿರುವ ಸರಕಾರ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದಡಿ 9 ರಿಂದ 12ನೇ ತರಗತಿ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡಬೇಕಾಗುತ್ತದೆ. ಈ ನಡುವೆ, ಆರ್‌ಟಿಇ ಕಾಯಿದೆಯನ್ನು ಸರಕಾರ ಒಪ್ಪಿರುವುದರಿಂದ ವಿಲೀನ ಪ್ರಕ್ರಿಯೆ ನಡೆಸುವುದು ಅನಿವಾರ್ಯ. ಇಲ್ಲದಿದ್ದರೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಿಂದ ರಾಜ್ಯಕ್ಕೆ ನೆರವು ಸಿಗುವುದಿಲ್ಲ.

●●7 ಕಿ.ಮೀ. ವ್ಯಾಪ್ತಿಯೊಳಗೆ ಸೆಕೆಂಡರಿ ಶಿಕ್ಷಣ

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಪ್ರಕಾರ, ಮಕ್ಕಳಿಗೆ 1 ಕಿ.ಮೀ. ವ್ಯಾಪ್ತಿಯೊಳಗೆ ಪ್ರಾಥಮಿಕ ಶಿಕ್ಷಣ; 3 ಕಿ.ಮೀ. ವ್ಯಾಪ್ತಿಯೊಳಗೆ ಹಿರಿಯ ಪ್ರಾಥಮಿಕ ಶಿಕ್ಷಣ; 5 ಕಿ.ಮೀ. ವ್ಯಾಪ್ತಿಯೊಳಗೆ 9-10 ಹಾಗೂ 7 ಕಿ.ಮೀ. ವ್ಯಾಪ್ತಿಯೊಳಗೆ 11 ಹಾಗೂ 12ನೇ ತರಗತಿ ಶಿಕ್ಷಣ

Nagesh TK: ಹೈಸ್ಕೂಲ್ ಹೈಕ್ಳುಗಳಿಗೆ ಡಿಜಿಟಲ್ ಶಿಕ್ಷಣ. Mar 19,

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ಕೆ ಅನುಮತಿ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ ‘ನಲಿ-ಕಲಿ’ ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4, 5ನೇ ತರಗತಿಗಳಿಗೂ ವಿಸ್ತರಣೆ
(PSGadyal Teacher Vijayapur )

* ಈ ವರ್ಷದೊಳಗೆ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ.

* ಬಿಸಿಯೂಟ ಅಡಿಗೆಯವರ ಮಾಸಿಕ ಗೌರವಧನ 300 ರೂ. ಹೆಚ್ಚಳ.

* ‘ನಲಿ-ಕಲಿ’ ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ.

* ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,5ನೇ ತರಗತಿಗಳಿಗೂ ವಿಸ್ತರಣೆ.

* ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಶಿಕ್ಷಕರ 6 ತರಬೇತಿ ಕಾಲೇಜುಗಳು.

* ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ.

* ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ.

ಸರಕಾರಿ ಪ್ರೌಢಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಒದಗಿಸಲು ಪ್ರೌಢಶಾಲಾ ಶಿಕ್ಷಕರ ಮೂಲಕ ಸಮಗ್ರವಾದ ಇ-ವಿಷಯಾಧರಿತ ‘ಐಟಿ ಅಟ್ ಸ್ಕೂಲ್ಸ್ ಇನ್ ಕರ್ನಾಟಕ’ ಎಂಬ ಕಾರ್ಯಕ್ರಮ ಪ್ರಾರಂಭಿಸಲು ಸರಕಾರ ನಿರ್ಧರಿಸಿದೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳನ್ನು ತಾರ್ಕಿಕವಾಗಿ ಸಮನ್ವಯಗೊಳಿಸಿ, ಐದು ಹೊಸ ಕಾರ್ಯಕ್ರಮಗಳಡಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಅವುಗಳೆಂದರೆ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ, ಗುಣಮಟ್ಟ ಖಾತರಿಯ ಉಪ ಕ್ರಮಗಳು, ತಂತ್ರಜ್ಞಾನ ಆಧರಿತ ಕಲಿಕೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳು.

ಸಮಂಜಸವಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ನೆರವಿನಿಂದ ಸರಕಾರಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ.

‘ನಲಿ-ಕಲಿ’ ಪುನರ್‌ರೂಪಿಸಿ ಜಾರಿ

ಇನ್ನು, ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ವಸ್ತುನಿಷ್ಠ ಮೌಲ್ಯಮಾಪನದಿಂದ ಯಶಸ್ವಿ ಕಲಿಕೆಯ ವಿಧಾನ ಎಂದು ಗುರುತಿಸಲಾಗಿರುವ ಚಟುವಟಿಕೆ ಆಧರಿತ ‘ನಲಿ-ಕಲಿ’ ವಿಧಾನವನ್ನು ಪುನರ್ ರೂಪಿಸಿ ಸಮಗ್ರವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಗಣಿತ ವಿಷಯದ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಮತ್ತು 5ನೇ ತರಗತಿಗಳಿಗೂ ವಿಸ್ತರಿಸಲಾಗುತ್ತಿದೆ.

ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಮೂಡಿಸುವ ಯಶಸ್ವಿ ಉಪ ಕ್ರಮಗಳನ್ನು ಕೈಗೊಂಡು ಲಾಭದ ನಿರೀಕ್ಷೆ ಹೊಂದಿಲ್ಲದ ಸಂಸ್ಥೆಗಳ ಚಟುವಟಿಕೆಗಳನ್ನು ವಿಸ್ತರಿಸಲು ಉದ್ದೇಶಿಸಿರುವ ಸರಕಾರ, 3 ವರ್ಷಗಳ ಅವಧಿಯಲ್ಲಿ ವೆಚ್ಚದ ಶೇ.50ರಷ್ಟನ್ನು ಭರಿಸಲಿದೆ. ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಜೆಯಲ್ಲಿ ಪೂರಕ ಬೋಧನೆಯ ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

●●ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ

2016ರೊಳಗೆ ಖಾಸಗಿ ಶಾಲೆ-ಕಾಲೇಜುಗಳೂ ಸೇರಿದಂತೆ ಶಾಲೆ-ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ತೀರ್ಮಾನಿಸಿದೆ. ಎಲ್ಲ ಸರಕಾರಿ ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡುವುದಾಗಿ ಸರಕಾರ ಪ್ರಕಟಿಸಿದೆ.
(PSGadyal Teacher Vijayapur)

●●ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡಿಗೆಯವರ ಗೌರವಧನವನ್ನು ಮಾಸಿಕ 300 ರೂ. ಹೆಚ್ಚಿಸಲಾಗಿದೆ. ಶಿಕ್ಷಕರ 6 ತರಬೇತಿ ಕಾಲೇಜುಗಳನ್ನು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರಲಾಗುತ್ತಿದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ ಆಡಳಿತ ಹಾಗೂ ಕಾರ್ಯವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

●●5 ವರ್ಷಗಳಿಗೆ ಮಾನ್ಯತೆ ನವೀಕರಣ

ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನಕ್ಕಾಗಿ ಮಾನ್ಯತೆ ಅಥವಾ ನಿರಾಕ್ಷೇಪಣೆ ಪತ್ರ ನೀಡುವುದು. ಶಿಕ್ಷಣ ಹಕ್ಕು ಕಾಯಿದೆಯಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಶಾಲೆಗಳಿಗೆ ಶಿಕ್ಷಣ ವೆಚ್ಚ ಮರುಪಾವತಿ ಪ್ರಕ್ರಿಯೆ ಮುಂದುವರಿಕೆ. ಎಲ್ಲ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿರುವ ಬೋಧಕ ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ವಿವರವನ್ನು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವ್ಯವಸ್ಥೆ ಮಾಡುವುದಾಗಿ ಸರಕಾರ ಪ್ರಕಟಿಸಿದೆ. ಒಟ್ಟಾರೆ, 2016-17ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 13,373 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

●●ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ನಿರ್ಧಾರ

-ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ, ಪ್ರಶಸ್ತಿ-

* ಕಲಬುರ್ಗಿ ಹೆಸರಿನಲ್ಲಿ ಅತ್ಯುತ್ತಮ ಸಂಶೋಧನಾ ಸಾಹಿತ್ಯಕ್ಕೆ ಪ್ರತಿ ವರ್ಷ ಪ್ರಶಸ್ತಿ

* ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ

* ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯಕ್ರಮಗಳಿಗೆ 1.5 ಕೋಟಿ ರೂ. ಅನುದಾನ

* ಕರ್ನಾಟಕ ಜಾನಪದ ವಿವಿ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಾರಂಪರಿಕ ಕೇಂದ್ರ ಸ್ಥಾಪನೆ

* ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ ‘ಜ್ಞಾನ ಸಂಗಮ’ ಯೋಜನೆ ವಿಸ್ತರಣೆ

* ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ತುಮಕೂರು ವಿವಿಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ರಾಜ್ಯದಲ್ಲಿ ಜ್ಞಾನ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ನೀಡುವ ಮಾನವ ಸಂಪನ್ಮೂಲ ಕೇಂದ್ರಿತ ಪ್ರಗತಿದಾಯಕ ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ.

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸಂಸ್ಥೆಗಳಲ್ಲಿ ‘ಜ್ಞಾನ ಸಂಗಮ’ ಯೋಜನೆ ವಿಸ್ತರಿಸುವುದರ ಜತೆಗೆ, ಸರಕಾರಿ ಕಾಲೇಜುಗಳು ಎನ್‌ಎಎಸಿ ಮಾನ್ಯತೆ ಪಡೆದು ಯುಜಿಸಿ ಅನುದಾನ ಪಡೆಯಲು ಅನುವಾಗುವಂತೆ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತದೆ. ಸಾಂಪ್ರದಾಯಿಕ ಪದವಿ ಕೋರ್ಸ್‌ಗಳ ಜತೆಗೆ, ಉತ್ತಮ ಉದ್ಯೋಗವಕಾಶಗಳಿರುವ ಕ್ಷೇತ್ರಗಳಾದ ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ರೀಟೇಲ್, ಪ್ರವಾಸೋದ್ಯಮ, ಮಾಧ್ಯಮ ಮತ್ತು ಮನೋರಂಜನೆ, ಎಲೆಕ್ಟ್ರಾನಿಕ್ಸ್ ಮತ್ತು ಆರೋಗ್ಯ ಪಾಲನೆ, ಮೆಕ್ಯಾನಿಕಲ್, ಸೈಬರ್ ಭದ್ರತೆ ಇತ್ಯಾದಿ ಕೋರ್ಸ್‌ಗಳನ್ನು 5 ಕೋಟಿ ರೂ.ಗಳ ವೆಚ್ಚದೊಂದಿಗೆ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ಐದು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತದೆ.

●●ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿವಿಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಜಾನಪದ ವಿವಿ ಕಾರ್ಯವ್ಯಾಪ್ತಿಯಲ್ಲಿ ರಾಜ್ಯದ ಶ್ರೀಮಂತ ಹಾಗೂ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಂಪರೆ ಬಿಂಬಿಸಲು ಕರ್ನಾಟಕ ಪಾರಂಪರಿಕ ಕೇಂದ್ರವನ್ನು 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

●●ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು

ಈ ವರ್ಷದಿಂದ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ನೀಡಲು ‘ಕ್ಷೀರಭಾಗ್ಯ ಯೋಜನೆ’ಯಡಿ 42.50 ಕೋಟಿ ರೂ. ಅನುದಾನ ಮೀಸಲಿಟ್ಟರೆ, ಹಿಂದುಳಿದ ತಾಲೂಕುಗಳಲ್ಲಿರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೈಕ್ರೊ ನ್ಯೂಟ್ರಿಯಂಟ್ಸ್ ಒದಗಿಸಲು ‘ಮಾತೃಪುಷ್ಟಿವರ್ಧಿನಿ’

Leave a Reply